ಚಿಕ್ಕಮಗಳೂರು, ಮಾ.15, ನ್ಯೂಸ್ ಎಕ್ಸ್ ಪ್ರೆಸ್: ಒಂದು ಕಡೆ ಮತದಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಇನ್ನೊಂದು ಕಡೆ ಮಲೆನಾಡಿನ ಕೆಲ ಭಾಗದಲ್ಲಿ ಚುನಾವಣೆಯ ಬಹಿಷ್ಕಾರದ ಕೂಗೂ ಜೋರಾಗಿ ಕೇಳುಬರ್ತಿದೆ.
ಚುನಾವಣೆಯ ದಿನಾಂಕ ಪ್ರಕಟ ಆದ ಐದೇ ದಿನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ, ಮರಿತೊಟ್ಲು, ಬಾಳೆಹೊಳೆ ಹಾಗೂ ಮೊದಲಮನೆ ಗ್ರಾಮಗಳಲ್ಲಿ “ನಾವು ಈ ಬಾರಿ ಲೋಕಸಭೆ ಚುನಾವಣೆಯ ಮತದಾನ ಬಹಿಷ್ಕಾರ ಮಾಡಿದ್ದೇವೆ; ನಾವು ಈ ಬಾರಿ ಮತದಾನ ಮಾಡಲ್ಲ” ಅನ್ನೋ ಬ್ಯಾನರ್ಗಳನ್ನ ಹಾಕಿ ಮತ ಕೇಳಲು ಬರೋ ಅಭ್ಯರ್ಥಿಗಳಿಗೆ ಸರಿಯಾಗೇ ಬಿಸಿ ಮುಟ್ಟಿಸುತ್ತಿದ್ದಾರೆ.