ಚಿರತೆ, ಮುಳ್ಳುಹಂದಿ ಕಾದಾಟ

ಮುಳ್ಳು ಹಂದಿಯೊಂದನ್ನು ಬೇಟೆಯಾಡಲು ನೋಡುತ್ತಿರುವ ಚಿರತೆಯೊಂದು
ಕಾಡಿನ ನಡುವೆ ಹಾದು ಹೋಗುವ ರಸ್ತೆಯೊಂದರ ಮಧ್ಯೆ ಬೇಟೆಯಲ್ಲಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆಲವೇ ಸೆಕೆಂಡ್ಗಳ ಈ ವಿಡಿಯೋದಲ್ಲಿ, ಚಿರತೆಯ ವಿರುದ್ಧ ತನ್ನ ಮುಳ್ಳುಗಳನ್ನೇ ಆಯುಧವನ್ನಾಗಿ ಮಾಡಿಕೊಂಡ ಮುಳ್ಳು ಹಂದಿಯು ಸಮನಾದ ಪೈಪೋಟಿ ನೀಡುತ್ತಿರುವುದು ನೆಟ್ಟಿಗರ ಗಮನ ಸೆಳೆದಿದೆ.
ವಾಹನದ ಬೆಳಕು ಅಗಾಧ ಪ್ರಮಾಣದಲ್ಲಿ ಬೀಳುತ್ತಿದ್ದರೂ ಕೊಂಚವೂ ವಿಚಲಿತವಾಗದ ಚಿರತೆ ಮುಳ್ಳುಹಂದಿಯನ್ನು ರಸ್ತೆ ಮೇಲೆಲ್ಲಾ ಓಡಾಡಿಸುತ್ತಿದ್ದರೆ, ಅತ್ತ ಮುಳ್ಳುಹಂದಿ ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿತ್ತು.

ಫ್ರೆಶ್ ನ್ಯೂಸ್

Latest Posts

Featured Videos