ಬೆಂಗಳೂರು, ಆ.7 : ಎಸ್ ಐ ಟಿ ಅಧಿಕಾರಿಗಳು ಜಮೀರ್ ಕಾನ್ ಐಎಂಎ ವಂಚನೆಯ ಪ್ರಮುಖ ಆರೋಪಿ ಮನ್ಸೂರ್ ಆಲಿಖಾನ್ಗೆ ಮಾರಾಟ ಮಾಡಿದ್ದ ಶಾಂತಿನಗರದಲ್ಲಿರುವ ಕಟ್ಟಡ ಮೇಲೆ ದಾಳಿ ನಡೆಸಿದ ವೇಳೆಯಲ್ಲಿ ತನಿಖಾ ಸಿಬ್ಬಂದಿ ಇವುಗಳನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.
ಐಎಂಎ ವಂಚನೆ ಆರೋಪಿ ಮನ್ಸೂರ್ ಆಲಿಖಾನ್ ಶಾಸಕ ಜಮೀರ್ ಆಹ್ಮದ್ ರಿಂದ ಪಡೆದುಕೊಂಡಿದ್ದ ಕಟ್ಟಡದಲ್ಲಿ ಬರೋಬ್ಬರಿ 303 ಕೆಜಿ ಚಿನ್ನದ ನಕಲಿ ಬಿಸ್ಕತ್ಗಳು ಪತ್ತೆಯಾಗಿವೆ ಎನ್ನಲಾಗಿದೆ. ಇನ್ನು ಸದ್ಯ ಐಎಂಎ ವಂಚನೆಯ ಪ್ರಮುಖ ಆರೋಪಿ ಮನ್ಸೂರ್ ಆಲಿಖಾನ್ ನ್ಯಾಯಾಂಗ ಬಂಧನದಲ್ಲಿದ್ದಾನೆ.