ನವದೆಹಲಿ,ಡಿ. 29 : ಭಾರೀ ಚಳಿಗೆ ರಾಜಧಾನಿ ದೆಹಲಿ ಗಢ ಗಢ ನಡುಗುತ್ತಿದ್ದು, 30 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿದೆ. ದೆಹಲಿಯಲ್ಲಿ ಬೆಳಗ್ಗೆ ಸರಾಸರಿ 2.4 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿತ್ತು. ಲೋದಿ ರಸ್ತೆಯಲ್ಲಿ ಅತ್ಯಂತ ಕಡಿಮೆ ಅಂದರೆ 1.7 ಡಿಗ್ರಿ ಸೆಲ್ಷಿಯಸ್ ಕನಿಷ್ಟ ತಾಪಮಾನ ಇತ್ತು. ಆಯಾನಗರ್ನಲ್ಲಿ 1.9 ಮತ್ತು ಸಪ್ತರ್ಜಂಗ್ನಲ್ಲಿ 2.4ರಷ್ಟು ಅತ್ಯಧಿಕ ಕಡಿಮೆ ಉಷ್ಣಾಂಶ ದಾಖಲಾಗಿತ್ತು.
ದಟ್ಟ ಮಂಜಿನಿಂದಾಗಿ ರಸ್ತೆಗಳಲ್ಲಿ ಕತ್ತಲು ಆವರಿಸಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗಿದೆ. ಇನ್ನು ದಟ್ಟ ಮಂಜಿನಿಂದಾಗಿ ದೆಹಲಿಯಲ್ಲಿ ವಿಮಾನಗಳ ಹಾರಾಟ ಮತ್ತು ರೈಲು ಸಂಚಾರವನ್ನು ರದ್ದು ಮಾಡಲಾಗಿದೆ. ದಟ್ಟ ಮಂಜು ಮತ್ತು ಕಲುಷಿತ ಹೊಗೆ ಸೇರಿ ದೆಹಲಿಯ ಹವಾಮಾನ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಮಾ ಗಳಿಲ್ಲದೆ ಜನರು ಹೊರಗೆ ಬರುವುದು ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.