ಮುಂಬೈ, ಡಿ. 25: ಆ್ಯಸಿಡ್ ಸಂತ್ರಸ್ತೆಯಾಗಿ ದೀಪಿಕಾ ಪಡಿಕೋಣೆ ಅಭಿನಯಿಸಿರುವ ಬಹು ನಿರೀಕ್ಷಿತ ಚಿತ್ರ ‘ಛಪಾಕ್’. ನೈಜ ಘಟನೆಯಾಧಾರಿತ ಚಿತ್ರ ಇದಾಗಿದ್ದು, ಇತ್ತೀಚೆಗಷ್ಟೆ ಇದರ ಟ್ರೈಲರ್ ಬಿಡುಗಡೆಯಾಗಿತ್ತು.
‘ಛಪಾಕ್’ ಚಿತ್ರವು 2020 ಜನವರಿ 10ಕ್ಕೆ ಬಿಡುಗಡೆಯಾಗಬೇಕಿದ್ದ ಈ ಸಿನಿಮಾಗೆ ಈ ಸಂಕಷ್ಟ ಎದುರಾಗಿದೆ. ಹೌದು, ಚಿತ್ರ ಬಿಡುಗಡೆಗೆ ಮುನ್ನವೇ ವಿವಾದಕ್ಕೀಡಾಗಿದೆ. ಬರಹಗಾರರೊಬ್ಬರು ಚಿತ್ರತಂಡದ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಚಿತ್ರತಂಡ ತಾನು ಬರೆದ ಕತೆಯನ್ನು ನಕಲು ಮಾಡಿದೆ. ಸಿನಿಮಾದಲ್ಲಿ ನನಗೆ ಕ್ರೆಡಿಟ್ ಕೊಡಬೇಕು ಎಂದು ರಾಕೇಶ್ ಭಾರತಿ ನ್ಯಾಯಾಲಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.
ರಾಕೇಶ್ ಅವರ ಪ್ರಕಾರ ‘ಛಪಾಕ್’ ಸಿನಿಮಾದ ಕತೆಯನ್ನು ‘ಬ್ಲ್ಯಾಕ್ ಡೇ’ ಶೀರ್ಷಿಕೆಯಡಿ ಚಿತ್ರ ನಿರ್ಮಿಸಲು ಬರೆದಿದ್ದರಂತೆ. ಅದನ್ನು 2015ರಲ್ಲೇ ರಿಜಿಸ್ಟರ್ ಸಹ ಮಾಡಿಸಿದ್ದರಂತೆ. ಅದಕ್ಕಾಗಿ ಹಣ ಹೂಡಿಸುವ ನಿರ್ಮಾಪಕರ ಹುಡುಕಾಟದಲ್ಲಿದ್ದರಂತೆ.