ಚೆಂಡು ಬಡಿದು ಜಹಂಗೀರ್ ಸಾವು

ಚೆಂಡು ಬಡಿದು ಜಹಂಗೀರ್ ಸಾವು

ಶ್ರೀನಗರ, ಜು.13 : ಬ್ಯಾಟಿಂಗ್ ಮಾಡುವಾಗ ಕುತ್ತಿಗೆಗೆ ಚೆಂಡು ಬಡಿದು ಯುವ ಕ್ರಿಕೆಟ್ ಆಟಗಾರ ಮೃತಪಟ್ಟ ಘಟನೆ ದಕ್ಷಿಣ ಕಾಶ್ಮೀರದ ಅನಂತ್ ನಾಗ್ನಲ್ಲಿ ನಡೆದಿದೆ. ಜಹಂಗೀರ್ ಅಹ್ಮದ್ ವಾರ್ (18) ಮೃತಪಟ್ಟ ಆಟಗಾರ. ಜಹಂಗೀರ್ ಅಹ್ಮದ್ ಉತ್ತರ ಕಾಶ್ಮೀರದ ಬರಮುಲ್ಲಾ ಜಿಲ್ಲೆಯ ನಿವಾಸಿಯಾಗಿದ್ದು, ಅನಂತ್ನಾಗ್ನಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಆಟವಾಡುತ್ತಿದ್ದರು.
ಹೆಲ್ಮೆಟ್ ಧರಿಸಿ ಆಟವಾಡುತ್ತಿದ್ದರೂ ಚೆಂಡು ಅಹ್ಮದ್ ಕುತ್ತಿಗೆಗೆ ಬಡಿದಿದೆ. ಇದರಿಂದ ಅವರು ಸ್ಥಳದಲ್ಲೇ ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಅಹ್ಮದ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲಿ ಅಹ್ಮದ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಜಮ್ಮು- ಕಾಶ್ಮೀರ ರಾಜ್ಯಪಾಲ ಎಸ್.ಪಿ ಮಲ್ಲಿಕ್ ಅವರು ಜಹಂಗೀರ್ ಅಹ್ಮದ್ ಸಾವಿಗೆ ದುಃಖ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜಹಂಗೀರ್ ಅಹ್ಮದ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ನೀಡಿದ್ದರು. ಎಸ್.ಪಿ ಮಲ್ಲಿಕ್ ಮೃತ ಆಟಗಾರ ಅಹ್ಮದ್ ಮಲ್ಲಿಕ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos