ಸಿಸಿಎಲ್ 10ನೇ ಸೀಸನ್ ಕ್ಷಣಗಣನೆ!

ಸಿಸಿಎಲ್ 10ನೇ ಸೀಸನ್ ಕ್ಷಣಗಣನೆ!

ಬೆಂಗಳೂರು: ಬಾಕಿ ಉಳಿದಿದೆ. ಇದೇ ತಿಂಗಳ 23ರಿಂದ ತಾರೆಯರು ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಅಖಾಡಕ್ಕಿಳಿಯುತ್ತಿದ್ದಾರೆ. ಸ್ಯಾಂಡಲ್ ವುಡ್ ಟು ಬಾಲಿವುಡ್ ತನಕ ಎಲ್ಲಾ ಇಂಡಸ್ಟ್ರೀಯ ಸ್ಟಾರ್ ಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್ 10 ಸೀಸನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆಷ್ಟೇ ದುಬೈನಲ್ಲಿ ಅದ್ಧೂರಿಯಾಗಿ ಸಿಸಿಎಲ್ ಗೆ ಚಾಲನೆ ಕೊಡಲಾಗಿತ್ತು. ಇದೀಗ ತಂಡಗಳು ಕ್ರಿಕೆಟ್ ಅಭ್ಯಾಸಕ್ಕಿಳಿದಿದ್ದಾರೆ.

ಸಿಸಿಎಲ್ 10ನೇ ಸೀಸನ್ ಫೆಬ್ರವರಿ 23 ರಿಂದ  ಶುರುವಾಗಿ ಮಾರ್ಚ್ 17 ರವರೆಗೆ ನಡೆಯಲ್ಲಿದೆ. ಭಾರತದ ಎಂಟು ಚಲನಚಿತ್ರೋದ್ಯಮಗಳ ಸೂಪರ್ಸ್ಟಾರ್ಗಳನ್ನು ಒಳಗೊಂಡಿರುವ ಒಟ್ಟು ಎಂಟು ತಂಡಗಳು ಯುಎಇ ಸೇರಿದಂತೆ ಭಾರತದ ಐದು ಸ್ಥಳಗಳಲ್ಲಿ 24 ದಿನಗಳ ಕಾಲ ಕ್ರಿಕೆಟ್ ಅಂಗಳದಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.

ಕರ್ನಾಟಕ ಬೋಲ್ಡರ್ ತಂಡದ ಮಾಲೀಕ ಅಶೋಕ್ ಖೇಣಿ ಮಾತನಾಡಿ, ’10 ವರ್ಷದ ಹಿಂದೆ ಕನ್ನಡ ಸಿನಿಮಾ ಇಂಡಸ್ಟ್ರೀ ಚಿಕ್ಕ ಇಂಡಸ್ಟ್ರೀಯಾಗಿತ್ತು. ಇಂಡಸ್ಟ್ರೀಯ ಒಟ್ಟಾರೆ ಗಳಿಗೆ 50 ಕೋಟಿಯಾಗಿತ್ತು. ಇದು 10 ವರ್ಷದ ಹಿಂದಿನ ಕಥೆ. ಕೆಜಿಎಫ್ ಬಂದ್ಮೇಲೆ ಇಂಡಸ್ಟ್ರೀ ತುಂಬ ಬದಲಾಗಿದೆ. ದರ್ಶನ್ ಇಂಡಸ್ಟ್ರೀಗೆ ಬಂದು 25 ವರ್ಷವಾಯ್ತು. ಅವರಿಗೆ 47 ವಯಸ್ಸು.

ಇಂದಿಗೂ. ಹೀರೋ ಆಗಿಯೂ ನಟಿಸ್ತಿದ್ದಾರೆ. ವರ್ಷಕ್ಕೆ 2 ಸಿನಿಮಾ ಮಾಡ್ತಿದ್ದಾರೆ. ನನ್ನ ಅದೃಷ್ಟ ಸಿಸಿಎಲ್ ನಲ್ಲಿ ಇಂತಹ ತಂಡ ಪಡೆದಿರುವುದು. ಸುದೀಪ್ ಅವರಿಗೆ ಕ್ರಿಕೆಟ್ ಅಂದ್ರೆ ಹುಚ್ಚು. ಕ್ರಿಕೆಟ್ ನ್ನು ಪ್ರೀತಿಸ್ತಾರೆ. ಒಮ್ಮೆ ಸಿಸಿಎಲ್ ನಲ್ಲಿ ಪೆಟ್ಟು ಮಾಡಿಕೊಂಡಿದ್ದರು. ಆದ್ರೆ ಅದನ್ನು ಲೆಕ್ಕಿಸದೇ ಮತ್ತೆ ಆಟವಾಡಿದ್ದರು. ಕ್ರಿಕೆಟ್ ಸಿನಿಮಾ ಇಂಡಸ್ಟ್ರೀಯ ಭಾಗ. ಅದೇ ರೀತಿ ಸಿನಿಮಾ ಕ್ರಿಕೆಟ್ ನ ಒಂದು ಭಾಗ’ ಎಂದರು.

ಈ ಬಾರಿ ಸಿಸಿಎಲ್ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು,ಕ್ರಿಕೆಟ್ ಪ್ರೇಮಿಗಳು ಮತ್ತು ಸಿನಿಮಾ ಪ್ರೇಮಿಗಳು ಮೈದಾನದಲ್ಲಿ ಮಾತ್ರವಲ್ಲ ದೂರದರ್ಶ, ಸೋನಿ, ಜಿಯೋ ಸಿನಿಮಾ ಪ್ರಸಾರಗೊಳ್ಳುತ್ತಿರುವುದು ಹೊಸ ದಾಖಲೆ ಬರೆದಿದೆ’ ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos