ನವದೆಹಲಿ, ನ. 20: ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ ಸಿ) ಯಲ್ಲಿ ಖಾಲಿ ಇರುವಂತ ವಿವಿಧ 357 ಹುದ್ದೆಗಳಿಗೆ ಪಿಯುಸಿ, ಡಿಗ್ರಿ ಪಾಸ್ ಆದಂತ ಅಭ್ಯರ್ಥಿಗಳಿಂದ ಅರ್ಜಿಯನ್ನು ಅಹ್ವಾನಿಸಿದೆ. ಈಗಾಗಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16.12.2019 ಆಗಿರುತ್ತದೆ.
ಹುದ್ದೆಗಳ ವಿವರ: ಸಹಾಯಕ ಕಾರ್ಯದರ್ಶಿ- 21 ಹುದ್ದೆಗಳು, ಅನಲಿಸ್ಟ್ – 14 ಹುದ್ದೆಗಳು, ಕಿರಿಯ ಭಾಷಾಂತರಕಾರರು – 8 ಹುದ್ದೆಗಳು, ಹಿರಿಯ ಸಹಾಯಕ – 60 ಹುದ್ದೆಗಳು, ಸ್ಟೆನೋ – 25 ಹುದ್ದೆಗಳು, ಅಕೌಂಟೆಂಟ್ – 6 ಹುದ್ದಿಗಳು, ಕಿರಿಯ ಸಹಾಯಕ – 204 ಹುದ್ದೆಗಳು, ಜೂನಿಯರ್ ಅಕೌಂಟೆಂಟ್ – 19 ಹುದ್ದೆಗಳು
ಅಭ್ಯರ್ಧಿಯು ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷದೊಳಗೆ ಇರಬೇಕು. ಇದರ ಜೊತೆಗೆ ಆಯಾ ವರ್ಗಗಗಳ ಜಾತಿಗೆ ಅನುಗುಣವಾಗಿ ಮೀಸಲಾತಿಯಂತೆ ವಯೋಮಿತಿ ಸಡಿಲಗೊಳಿಸಲಾಗಿದೆ.
ವೇತನ ಶ್ರೇಣಿ ಮತ್ತು ನೇಮಕಾತಿ ವಿಧಾನ – ಸಿಬಿಎಸ್ ಸಿ ಕರೆದಿರುವ ಹುದ್ದೆಗಳಿಗೆ ಕೇಂದ್ರ ಸರ್ಕಾರದ ಪೇ ಬ್ಯಾಂಡ್ 7ರ ಅನ್ವಯದಂತೆ ವೇತನ ನೀಡಲಾಗುತ್ತದೆ. ಹೀಗಾಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತಿದ್ದು, ಇದರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಸಂದರ್ಶನದ ಮೂಲಕ, ಮೂಲಕ ದಾಖಲೆಗಳ ಪರೀಕ್ಷೆಯ ನಂತ್ರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.