ಕಾವೇರಿ ಪ್ರಾಧಿಕಾರದಿಂದ ರಾಜ್ಯಕ್ಕೆ ಹಿನ್ನೆಡೆ

ಕಾವೇರಿ ಪ್ರಾಧಿಕಾರದಿಂದ ರಾಜ್ಯಕ್ಕೆ ಹಿನ್ನೆಡೆ

ಬೆಂಗಳೂರು,ಸೆ. 30: ಮಳೆಕೊರತೆಯಿಂದ ಜಲಾಶಯಗಳಲ್ಲಿ ನೀರಿಲ್ಲದೆ ಎದುರಾಗಿರುವ ಸಂಕಷ್ಟ ಪರಿ ಸ್ಥಿತಿಯನ್ನು ಕಾನೂನಾತ್ಮಕವಾಗಿ ಸಮರ್ಥ ವಾಗಿ ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಹಾಲಿ ಅಡ್ವಕೇಟ್ ಜನರಲ್‌ಗಳು, ಸುಪ್ರಿಂ ಕೋರ್ಟ್‌ನಕೆಲಹಿರಿಯವಕೀಲರೊಂದಿಗೆ ಸಭೆ ನಡೆಸಿದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿಗೆ 3000 ಕ್ಯುಸೆಕ್‌ ನೀರು ಬಿಡುವ ಬಗ್ಗೆ ಎರಡೂ ಸಮಿತಿಗಳ ಮುಂದೆ ನಮ್ಮಲ್ಲಿ ನೀರು ಇಲ್ಲ.

ಕಾವೇರಿ ಜಲಾನಯನದ ನಮ್ಮ ಜಲಾ ಶಯಗಳಲ್ಲೇ ಸಾಕಷ್ಟು ನೀರಿಲ್ಲದ ಕಾರಣ ತಮಿಳುನಾಡಿಗೆ ನೀರು ಬಿಡಲು ಸಾಧ್ಯ ವಿಲ್ಲ. ಹಾಗಾಗಿ ಕಾನೂನು ಪರಿಣತರ ಸಲಹೆಯಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್‌ ಮುಂದೆ ನಿತ್ಯ 3000 ಕ್ಯುಸೆಕ್‌ ನೀರು ಹರಿಸಬೇಕೆಂಬ ಅದೇಶ ಪರಿಶೀಲಿಸುವಂತೆ ಶನಿವಾರವೇ ಅರ್ಜಿ ಹಾಕಲಾಗುವುದು ಎಂದು ಮುಖ್ಯಮಂತ್ರಿಸಿದ್ದರಾಮಯ್ಯ ತಿಳಿಸಿದರು.

ಅಲ್ಲದೆ, ಪ್ರಮುಖವಾಗಿ ಕಾವೇರಿ, ಕೃಷ್ಣಾ ಮೇಲ್ದಂಡೆ, ಮಹದಾಯಿ ಸೇರಿ ಅಂತಾರಾಜ್ಯ ಜಲವಿವಾದಗಳಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಕಾನೂನು ತಂಡಕ್ಕೆ ಸಲಹೆ ನೀಡಲು ಪರಿಣಿತರನ್ನೊಳಗೊಂಡ ಸಲಹಾ ಸಮಿತಿ ರಚಿ ಸಲು ಹೇಳಿದ್ದಾರೆ. ಈ ಸಮಿತಿ ನಿತ್ಯ ಡಾಟಾ ಸಂಗ್ರಹಿಸಿ ಸರ್ಕಾರಕ್ಕೆ ನಿರಂತರ ಮಾಹಿತಿ, ಸಲಹೆ ನೀಡುವುದು ಒಳ್ಳೆಯದು ಎಂದು ಹೇಳಿದ್ದಾರೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos