ರುಚಿಗೂ ಸೈ, ಆರೋಗ್ಯಕ್ಕೂ ಜೈ ಹಿತಕರ ‘ಏಲಕ್ಕಿ’

ರುಚಿಗೂ ಸೈ, ಆರೋಗ್ಯಕ್ಕೂ ಜೈ ಹಿತಕರ ‘ಏಲಕ್ಕಿ’

ಮಾ.9, ನ್ಯೂಸ್ ಎಕ್ಸ್ ಪ್ರೆಸ್: ಏಲಕ್ಕಿ ಭಾರತೀಯ ಸಾಂಬಾರ ಪದಾರ್ಥಗಳಲ್ಲಿ ಅಗ್ರ ಸ್ಥಾನ ಪಡೆದಿದೆ. ಅಡುಗೆ ರುಚಿಯನ್ನು ಇಮ್ಮಡಿಗೊಳಿಸುವ ಶಕ್ತಿ ಇದಕ್ಕಿದೆ. ಸಿಹಿಖಾದ್ಯಗಳು ಪರಿಪೂರ್ಣಗೊಳ್ಳುವುದೇ ಏಲಕ್ಕಿಯಿಂದ.

ಏಲಕ್ಕಿ ಕೇವಲ ಖಾದ್ಯಗಳಿಗೆ ಮಾತ್ರವಲ್ಲದೇ, ಅನೇಕ ಔಷಧೀಯ ಗುಣಗಳಿಂದ ಕೂಡಿದೆ. ಅವುಗಳ ಉಪಯೋಗ ಈ ಕೆಳಕಂಡಂತಿದೆ:

ಇತ್ತೀಚಿನ ದಿನಗಳಲ್ಲಿ ಅಜೀರ್ಣದ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಅಧಿಕವಾಗಿದ್ದು, ಅಂಥವರು ಏಲಕ್ಕಿ ಸೇವಿಸಿದರೆ ಸಮಸ್ಯೆ ಶಮನಗೊಳ್ಳುವುದು ಖಂಡಿತ.

ಏಲಕ್ಕಿಯ ವಿಶೇಷವೆಂದರೆ, ಇದು ಆಹಾರ ಜೀರ್ಣವಾಗಿ ಬಾಯಿಗೆ ರುಚಿಯುಂಟು ಮಾಡುತ್ತದೆ. ಒಣಕೆಮ್ಮು ಕಾಣಿಸಿಕೊಂಡಾಗ ಏಲಕ್ಕಿ ಪುಡಿಗೆ ಸ್ವಲ್ಪ ಶುಂಠಿ ಪುಡಿಯನ್ನು ಸೇರಿಸಿ ಸೇವಿಸಿದರೆ ಒಣಕೆಮ್ಮು ಮಾಯವಾಗುತ್ತದೆ.

ಮೇಲಿಂದ ಮೇಲೆ ಭೇದಿಯಾಗುತ್ತಿದ್ದರೆ ಸ್ವಲ್ಪ ಏಲಕ್ಕಿಯನ್ನು ಬೆಣ್ಣೆಯೊಡನೆ ಅರೆದು ತಿನ್ನುವುದರಿಂದ ಭೇದಿ ಕಡಿಮೆಯಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos