ಬೆಂಗಳೂರು , ನ. 15: ಬ್ಯಾಯಟರಾಯನಪುರದ ರಾಘವನಗರದ ಬಳಿ ಆಟೋ ಚಾಲಕ ಸತೀಶ್ ಎಂಬ ವ್ಯಕ್ತಿ ಬಾರ್‌ನಲ್ಲಿದ್ದ ಪುಡಿರೌಡಿಗಳನ್ನು ಗುರಾಯಿಸಿದ್ದೇ ಆತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ಪುಡಿ ರೌಡಿಗಳನ್ನು ಬಂಧಿಸಲಾಗಿದೆ.
ನ. 8ರ ರಾತ್ರಿ 10.45 ಸುಮಾರಿಗೆ ಬಾರ್‌ಗೆ ಬಂದ ಆಟೋ ಚಾಲಕ ಸತೀಶ್ ಅಲ್ಲಿದ್ದ ದುಷ್ಕರ್ಮಿಗಳನ್ನು ದಿಟ್ಟಿಸಿ ನೋಡಿದ್ದಾನೆ. ಅದಾಗಲೇ ಕುಡಿದು ತೂರಾಡುತ್ತಿದ್ದ ಆ ರೌಡಿಗಳು ತಮ್ಮನ್ನು ಗುರಾಯಿಸಿದ ಸತೀಶ್ ಜೊತೆಗೆ ಜಗಳವಾಡಿದ್ದಾರೆ. ಜಗಳ ತಾರಕಕ್ಕೇರಿದ್ದು, ಏರಿಯಾ ತುಂಬ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಜೋಗಯ್ಯ, ಪಿನಿತ್, ವಿಕ್ಕಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ
ನಗರದಲ್ಲಿ ಹೆಚ್ಚುತ್ತಿರುವ ಪುಡಿರೌಡಿಗಳ ಆರ್ಭಟಕ್ಕೆ ಅಮಾಯಕ ಆಸ್ಪತ್ರೆ ಸೇರಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಲಾಂಗು, ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಬಾರ್‌ನಲ್ಲಿ ಗುರಾಯಿಸಿದ್ದಕ್ಕೆ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಮಚ್ಚು ಬೀಸಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ.