ಬೈಕ್ ನಿಂದ ಬಿದ್ದು ಯುವಕ ಸಾವು

ಬೈಕ್ ನಿಂದ ಬಿದ್ದು ಯುವಕ ಸಾವು

ಬಜಪೆ, ಸೆ. 18 : ಬೈಕ್ ನಿಂದ ಬಿದ್ದು ಯುವಕನೋರ್ವ ಸ್ಥಳದಲ್ಲೆ ಮೃತಪಟ್ಟ ಘಟನೆ ಮರವೂರಿನಲ್ಲಿ ನಡೆದಿದೆ.
ಮೃತ ಯುವಕ ಅಕ್ಷಿತ್ ಪೂಜಾರಿ (24). ಜನಾರ್ಧನ ಮತ್ತು ಲಲಿತ ದಂಪತಿ ಎರಡನೇ ಮಗ. ಕೆಲಸ ಮುಗಿಸಿಕೊಂಡು ಮಧ್ಯರಾತ್ರಿ 12 ಗಂಟೆ ವೇಳೆ ಮನೆಗೆ ಹಿಂದಿರುಗುತ್ತಿದ್ದ ಸಮಯದಲ್ಲಿ ಬೈಕ್ ಸ್ಕಿಡ್ ಆಗಿ ಮರವೂರಿನ ರೈಲ್ವೇ ಬ್ರಿಡ್ಜ್ ಕೆಳಗಿನ ರಾಡ್ ಗೆ ತಲೆಬಿಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos