ಪೊಲೀಸರಿಂದ ಲಾಠಿ ಪ್ರಹಾರ

ಪೊಲೀಸರಿಂದ ಲಾಠಿ ಪ್ರಹಾರ

ಮಂಗಳೂರು, ಡಿ. 19 : ಸೆಕ್ಷನ್ 144ರ ನಿಷೇಧಾಜ್ಞೆ ನಡುವೆಯೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಗೇಟ್ ಮುಂಭಾಗ ಪ್ರತಿಭಟನೆಗೆ ಯತ್ನ ಮಾಡಿದ್ದ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಆಶ್ರುವಾಯು ಪ್ರಯೋಗ ನಡೆಸಿದರು.
ಡಿ.20ರವರೆಗೆ ದ.ಕ ಜಿಲ್ಲೆಯಾದ್ಯಂತ ಈಗಾಗಲೇ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ. ಅದರ ನಡುವೆಯೇ ದಿಢೀರ್ ಆಗಿ ಗುಂಪು ಸೇರಿ ನಗರದ ಸ್ಟೇಟ್ಬ್ಯಾಂಕ್ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾಗಿದ್ದರು. ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದ್ದ ಯುವಕರ ಗುಂಪು ಪೊಲೀಸರಿಗೂ ದಿಕ್ಕಾರ ಕೂಗುತ್ತಿದ್ದರು. ದೊಡ್ಡ ಸಂಖ್ಯೆಯಲ್ಲಿದ್ದ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಪೊಲೀಸರ ಲಾಠಿಪ್ರಹಾರಕ್ಕೆ ಜಗ್ಗದೆ ಬಸ್ ಮೇಲೆ ಕಲ್ಲುತೂರಾಟಕ್ಕಿಳಿದ ಯುವಕರನ್ನು ನಿಯಂತ್ರಿಸಲು ಪೊಲೀಸರಿಂದ ಅಶ್ರುವಾಯು ಶೆಲ್ ಪ್ರಯೋಗ ನಡೆಸಿದರು. ಮಿಲಾಗ್ರಿಸ್, ಸ್ಟೇಟ್ ಬ್ಯಾಂಕ್ ರಸ್ತೆ ಬಂದ್, ಸ್ಥಳೀಯ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos