ಹಾಸನ, ಸೆ. 25 : ಮುತ್ತು ಮಧುರ. ಅದೊಂದು ಪ್ರೀತಿಯ ಉತ್ತುಂಗದ ಭಾವ. ಮತ್ತೆ ಮತ್ತೆ ಅನುಭವಿಸಬೇಕು ಎಂದೆನಿಸುವ ಆಹ್ಲಾದಕರ ಅತ್ಯಾಸೆ. ಚುಂಬನದ ಕಣಿವೆಯಲ್ಲಿ ಮಿಂದೆದ್ದ ಪ್ರೇಮಿಗೆ ಜಗತ್ತು ಸ್ವರ್ಗವೆನಿಸುತ್ತದಂತೆ. ಪ್ರೇಮಿಗಳ ಮುತ್ತಿಗೂ ಒಂದು ಸ್ಥಾನವಿದೆ. ಮುತ್ತಿಕ್ಕಲೊಂದು ಅದಕ್ಕೆ ಮುತ್ತಿಗೆ ಜಾಗವಿದೆ. ಇದನ್ನು ಮೀರಿ ಯುವ ಪ್ರೇಮಿಗಳು ಬಸ್ ನಲ್ಲಿಯೇ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾಸನ-ಬೆಂಗಳೂರು ನಾನ್ ಸ್ಟಾಪ್ ಬಸ್ ನಲ್ಲಿ ಪ್ರೇಮಿಗಳ ಸರಸ ಸಲ್ಲಾಪದ ವಿಡಿಯೋ ವೈರಲ್ ಆಗಿದೆ. ಬಸ್ನಲ್ಲಿ ಅಕ್ಕ-ಪಕ್ಕ ಕುಳಿತು ಜೋಡಿ ಪ್ರಯಾಣಿಕರು ಕುಳಿತಿದ್ದರೂ ಒಬ್ಬರಿಗೊಬ್ಬರು ತಬ್ಬಿಕೊಂಡು ಚುಂಬನ ನೀಡುತ್ತಾ ಮೈ ಮರೆತಿದ್ದಾರೆ. ಜೋಡಿ ಕುಳಿತಿದ್ದ ಪಕ್ಕದ ಸೀಟ್ ನಲ್ಲಿ ಕುಳಿತಿದ್ದ ಸಹ ಪ್ರಯಾಣಿಕರೊಬ್ಬರು ಪ್ರೇಮಿಗಳು ವರ್ತನೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡಿದ್ದಾರೆ.