ಚಿಕ್ಕಬಳಪುರ, ಡಿ. 25: ಇಂದು ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಬಳಿ ಕೆಎಸ್ಆರ್ಟಿಸಿ ಬಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಾಗೇಪಲ್ಲಿ ತಾಲೂಕಿನ ಸಜ್ಜರವಾರಪಲ್ಲಿ ನಿವಾಸಿ ಸುರೇಂದ್ರ (20) ಮೃತ ವಿದ್ಯಾರ್ಥಿ. ಸುರೇಂದ್ರ ಬೈಕ್ ಮೂಲಕ ಚಿಂತಾಮಣಿ ನಗರದ ಐಟಿಐ ಕಾಲೇಜಿಗೆ ಪ್ರತಿದಿನ ಹೋಗುತ್ತಿದ್ದನು. ಇಂದು ಮೃತ ಸುರೇಂದ್ರ ಅತಿವೇಗದಿಂದ ಬೈಕ್ ಓಡಿಸುತ್ತಿದ್ದನು. ಇದರ ಪರಿಣಾಮ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದ್ದಾನೆ ಸ್ಥಳದಲ್ಲಿ ಮೃತ ವಿದ್ಯಾರ್ಥಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಾಹಿತಿ ತಿಳಿದು ಕೆಂಚಾರ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಬಸ್ ವಶಕ್ಕೆ ಪಡೆದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.