ಅಪಥ್ಯವಾದ ಆರ್‌ಬಿಐ ನೀತಿ : ಮುಂಬಯಿ ಶೇರು 250 ಅಂಕ ಕುಸಿತ

  • In Country
  • December 8, 2018
  • 294 Views
ಅಪಥ್ಯವಾದ ಆರ್‌ಬಿಐ ನೀತಿ : ಮುಂಬಯಿ ಶೇರು 250 ಅಂಕ ಕುಸಿತ

ಮುಂಬಯಿ : ಅಮೆರಿಕ – ಚೀನ ವಾಣಿಜ್ಯ ಸುಂಕ ಸಮರ ಮತ್ತೆ ಉಲ್ಬಣಿಸುವ ಭೀತಿಗೆ ಜಾಗತಿಕ ಶೇರು ಪೇಟೆಗಳು ನಲುಗಿರುವ ನಡುವೆಯೇ ಇತ್ತ ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ರಿಪೋ ಮತ್ತು ರಿವರ್ಸ್‌ ರಿಪೋ ದರಗಳನ್ನು ಯಥಾವತ್‌ಉಳಿಸಿಕೊಂಡ ಕಾರಣಕ್ಕೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ 249.90 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 35,884.41 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 84.55 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,784.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ನಿರಂತರ ಏಳು ಬೀಳುಗಳ ಇಂದಿನ ವಹಿವಾಟಿನಲ್ಲಿ ಮೆಟಲ್‌, ಫಾರ್ಮಾ, ಆಟೋ ಮತ್ತು ಬ್ಯಾಂಕಿಂಗ್‌ ರಂಗದ ಶೇರುಗಳು ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾದವು. ಡಾಲರ್‌ ಎದುರು ರೂಪಾಯಿ ಇಂದು 11 ಪೈಸೆಗಳ ಕುಸಿತಕ್ಕೆ ಗುರಿಯಾಗಿ 70.60 ರೂ. ಮಟ್ಟಕ್ಕೆ ಇಳಿದದ್ದು ಶೇರು ಪೇಟೆಗೆ ಅಪಥ್ಯವೆನಿಸಿತು.

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,715 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 791 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,717 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 147 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos