ಲಂಡನ್, ಮೇ. 4, ನ್ಯೂಸ್ ಎಕ್ಸ್ ಪ್ರೆಸ್: ನಮ್ಮ ಕನ್ನಡಿಗರು ಎಲ್ಲಂದರಲ್ಲಿ ಬೆಳೆಯುತ್ತಿದ್ದಾರ. ಹೌದು, ಬ್ರಿಟನ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕನ್ನಡಿಗರಿಬ್ಬರು ಭರ್ಜರಿ ಜಯಗಳಿಸಿದ್ದಾರೆ.ಇದಪ್ಪ ಲಂಡನ್ ನಲ್ಲಿ ಮೂಳೆವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೆಂಚಾಪುರ ಗ್ರಾಮದವರಾದ ಡಾ. ಕುಮಾರ್ ನಾಯ್ಕ್ ಸ್ವಿಂಡನ್ ಹೇಡನ್ ವಿಕ್ ಕ್ಷೇತ್ರದಲ್ಲಿ ಕನ್ಸರ್ವೇಟಿವ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ.
ಇನ್ನು ಮತ್ತೊಬ್ಬ ಕನ್ನಡಿಗ ಸುರೇಶ್ ಗಟ್ಟಾಪುರ ಅವರು ಸ್ವಿಂಡನ್ ವೆಸ್ಟಿಯಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿಸ್ಪರ್ಧಿಸಿ ಗೆಲುವು ಕಂಡಿದ್ದಾರೆ.