ಟ್ರಾಫಿಕ್ ಜಂಕ್ಷನ್ ನಲ್ಲಿ ಬೊಂಬೆ ಪೊಲೀಸ್

ಟ್ರಾಫಿಕ್ ಜಂಕ್ಷನ್ ನಲ್ಲಿ ಬೊಂಬೆ ಪೊಲೀಸ್

ಬೆಂಗಳೂರು, ನ. 25: ನಗರದಲ್ಲಿ  ಟ್ರಾಫಿಕ್ ನಿಯಮ ಪಾಲಿಸದ ಅದೆಷ್ಟೋ ಮಂದಿ ಸಗ್ನಲ್ ಜಂಪ್ ಮಾಡೋದು ಸರ್ವೇಸಾಮಾನ್ಯ ಆಗಿದೆ. ಪ್ರತಿ ದಿನ ಪೊಲೀಸರು ದಂಡ ವಿಧಿಸೋದು ತಪ್ಪುತ್ತಿಲ್ಲ. ರಸ್ತೆ ಮತ್ತು ಸಿಗ್ನಲ್ ಗಳಲ್ಲಿ ಪೊಲೀಸರು ಇದ್ದರೆ ಸ್ವಲ್ಪ ಮಟ್ಟಿಗೆ ನಿಯಮ ಪಾಲನೆ ಮಾಡುತ್ತಾರೆ. ಪೊಲೀಸರು ಸಿಗ್ನಲ್ ಗಳಲ್ಲಿ ಕಾಣಿಸದಿದ್ದರೆ ಸಿಗ್ನಲ್ ಜಂಪ್ ಜೊತೆಗೆ ಒನ್ ವೇ, ಫುಟ್ ಪಾತ್‌ ಮೇಲೆ ನುಗ್ಗಿಸಿಕೊಂಡು ಹೋಗುವ ಅಡ್ಡಾ ದಿಡ್ಡಿ ವಾಹನ ಚಾಲಕರಿಗೆ ನಿಯಂತ್ರಣ ಮಾಡಲು ಪೊಲೀಸ್ ಇಲಾಖೆ ಗೊಂಬೆ ಪೊಲೀಸ್ ನಿಲ್ಲಿಸುವ  ಆಲೋಚನೆಗೆ ಮುಂದಾಗಿದೆ.

ನಗರದ ವಿವಿಧ ರಸ್ತೆಗಳಲ್ಲಿ ಸಂಚಾರ ಪೊಲೀಸ್ ಜತೆಯಲ್ಲಿ‌ ನೋಡಲು ಅಪ್ಪಟ ಸಂಚಾರಿ ಪೊಲೀಸರಂತೆ ಹೋಲುವ ಸಂಚಾರಿ ಪೊಲೀಸ್ ಗೊಂಬೆ ಇನ್ನು ಮುಂದೆ ಕರ್ತವ್ಯಕ್ಕೆ ಅಣಿಯಾಗಲಿವೆ.

ನಗರದಲ್ಲಿ ಬಹುತೇಕ ಸವಾರರು ತಮ್ಮ ಜವಾಬ್ದಾರಿಯನ್ನು ನಿರ್ಲಕ್ಷ್ಯ ತೋರಿ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ಎಲ್ಲೆಂದರಲ್ಲಿ ವಾಹನಗಳನ್ನು ಚಲಾಯಿಸಿ ಸಂಚಾರಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಸಿಗ್ನಲ್ ಗಳಲ್ಲಿ ಪೊಲಿಸರಿದ್ದರೆ ಮಾತ್ರ ನಿಯಮ ಪಾಲನೆ ಮಾಡುತ್ತಾರೆ. ಇಲ್ಲವೆಂದರೆ ಅಡ್ಡಾದಿಡ್ಡಿ ಚಾಲನೆ ಮಾಮೂಲಾಗಿಬಿಟ್ಟಿದೆ.

ಟ್ರಾಫಿಕ್ ಉಲ್ಲಂಘನೆ ಮಾಡುವವರ ಮೇಲೆ ನಿಗಾ ವಹಿಸಿ ಸಂಚಾರ ನಿಯಮ ಪಾಲನೆಯ ಸದುದ್ದೇಶದೊಂದಿಗೆ ನಗರ ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಗೊಂಬೆಗಳನ್ನು ನಿಲ್ಲಿಸಲಾಗುತ್ತಿದೆ.

ಪ್ರಥಮ ಹಂತದಲ್ಲಿ ಬಿವಿಕೆ ಅಯ್ಯಂಗಾರ್ ರಸ್ತೆಯ ಚಿಕ್ಕಪೇಟೆ ವೃತ್ತದಲ್ಲಿ ಪ್ರಾಯೋಗಿಕವಾಗಿ ಗೊಂಬೆಯನ್ನು ನಿಲ್ಲಿಸಲಾಗಿದೆ ಎಂದು ಕೆ.ಆರ್.ಪೇಟೆ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ಶರಣಪ್ಪ  ತಿಳಿಸಿದ್ದಾರೆ.

ಒಂದು ಕಡೆ ಮಾತ್ರ ಗೊಂಬೆ ನಿಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕೆ.ಆರ್ ಮಾರುಕಟ್ಟೆ ವೃತ್ತ ಸೇರಿದಂತೆ ಇತರ ಹೆಚ್ಚು ಟ್ರಾಫಿಕ್ ಸಿಗ್ನಲ್ ಜಂಕ್ಷನ್ ಗಳಲ್ಲಿ ಸಮವಸ್ತ್ರ ಧರಿಸಿದ ಪೊಲೀಸ್ ಗೊಂಬೆ ಅಳವಡಿಸಲಾಗುವುದು.

ಇಲಾಖೆಯ ಬಿಳಿ ಸಮವಸ್ತ್ರ, ಶೂ, ಪ್ರತಿಫಲನಾ ಜಾಕೇಟ್ ಗಳನ್ನು ದಾನಿಗಳಿಂದ ಎರವಲು ಪಡೆಯವುದರಿಂದ ಇಲಾಖೆಗೆ ಇದರಿಂದ ಯಾವುದೇ ಹೊರೆಯಾಗಲಾರದು.

ಜಂಕ್ಷನ್ ಗಳಲ್ಲಿ ಪೊಲೀಸರು ಇದ್ದಾರೆಂಬ ಭಯದಿಂದ ಯಾವ ವಾಹನ. ಸವಾರರು ನಿಯಮ ಉಲ್ಲಂಘನೆ ಮಾಡುವುದಿಲ್ಲ ಎಂಬ ಉದ್ದೇಶದಿಂದ ಗೊಂಬೆ ಸಂಚಾರಿ ಪೊಲೀಸ್ ನಿಲ್ಲಿಸಲಾಗಿದೆ. ಭಾಸ್ಕರ್ ರಾವ್ ನಗರ  ಪೊಲೀಸ್ ಆಯುಕ್ತರು ತಿಳಿಸಿದರು.

ಈಗಾಗಲೇ ಪ್ರಯೋಗ ನಡೆದಿತ್ತು

ಈ ಹಿಂದೆಯೇ ಗೊಂಬೆ ಸಂಚಾರಿ ಪೊಲೀಸ್ ಅಳವಡಿಸುವ ಚಿಂತನೆ ಮಾಡಲಾಗಿತ್ತು. ಪೊಲೀಸರು ಇರುವ ಹಾಗೆ ಕಾಣುವ ಫಲಕಗಳನ್ನು ಅಳವಡಿಸಲಾಗಿತ್ತು. ಅವು ಗಾಳಿ ಮಳೆ ಮತ್ತಿತರ ಕಾರಣಗಳಿಂದಾಗಿ ಹಾಳಾಗಿದ್ದವು. ಮತ್ತೀಗ ಗೊಂಬೆಗಳು‌ ಬರಲಿವೆ ಎಚ್ಚರಿಕೆ.

ಹೊರೆ ತಪ್ಪಿಸುವ ಯತ್ನ: ಎಲ್ಲಾ ಜಂಕ್ಷನ್ ಮತ್ತು ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡವುದು ಕಷ್ಟ. ಗೊಂಬೆ ಪೊಲೀಸ್ ಅಳವಡಿಕೆಯಿಂದ ದೂರದಿಂದ ನೋಡುವವರಿಗೆ ಗೊಂಬೆ ನಿಜವಾದ ಸಂಚಾರಿ ಪೊಲೀಸರಂತೆ ಕಾಣುತ್ತದೆ ವೆತ್ಯಾಸ ಗೊತ್ತಾಗುವುದಿಲ್ಲ. ಒನ್ ವೇ ನಲ್ಲಿ ನುಗ್ಗುವವರು ಇವುಗಳನ್ನುಕಂಡ ತಕ್ಷಣ ವಾಪಸ್ ಹೋಗುತ್ತಾರೆ.  ಬಾಲಕೃಷ್ಣ ಸಂಚಾರಿ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos