ರಾಂಚಿ, ಅ.13 : ಬಾಲಿವುಡ್ ನಟಿ ಅಮಿಷಾ ಪಟೇಲ್ ಗೆ ಬಂಧನ ಭೀತಿ ಶುರು. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ.
ಚೀಟಿಂಗ್ ಮತ್ತು ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಅಮೀಷಾ ವಿರುದ್ಧ ರಾಂಚಿ ಕೋರ್ಟ್ ಅರೆಸ್ಟ್ ವಾರೆಂಟ್ ಹೊರಡಿಸಿದೆ. ರಾಂಚಿ ಡಿಸ್ಟ್ರಿಕ್ಟ್ ಕೋರ್ಟ್ನಲ್ಲಿ ಕಳೆದ ವರ್ಷ ಅಜಯ್ ಕುಮಾರ್ ಸಿಂಗ್ ಎಂಬುವವರು ನಟಿ ವಿರುದ್ಧ ದೂರು ನೀಡಿದ್ದರು. ಇದರನ್ವಯ ಅರೆಸ್ಟ್ ವಾರೆಂಟ್ ಜಾರಿಯಾಗಿದೆ ಅಂತಾ ರಾಂಚಿ ಪೊಲೀಸರು ಹೇಳಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ನಟಿ ಅಮೀಷಾ ಪಟೇಲ್ ಮತ್ತು ಆಕೆಯ ಬ್ಯುಸಿನೆಸ್ ಪಾರ್ಟ್ನರ್ ಕುನಾಲ್ ಎನ್ನುವವರು ಚಿತ್ರ ನಿರ್ಮಿಸುವುದಾಗಿ ನನ್ನ ಬಳಿ 2.50ರೂ ಕೋಟಿ ಸಾಲ ಪಡೆದಿದ್ದರು. ಆಗ ಈ ಸಿನಿಮಾ 2018ಕ್ಕೆ ರಿಲೀಸ್ ಆಗುತ್ತೆ. ನಂತರ ನಾವು ನಿಮಗೆ ನಿಮ್ಮ ಹಣವನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದರು.