ಬ್ಯಾಂಕ್ ಆಫ್ ಬರೋಡಾ ಆಗಿ ಇತಿಹಾಸ ಸೇರಿದ ‘ವಿಜಯಾ ಬ್ಯಾಂಕ್’

ಬ್ಯಾಂಕ್ ಆಫ್ ಬರೋಡಾ ಆಗಿ ಇತಿಹಾಸ ಸೇರಿದ ‘ವಿಜಯಾ ಬ್ಯಾಂಕ್’

ಬೆಂಗಳೂರು, ಏ. 1, ನ್ಯೂಸ್ ಎಕ್ಸ್ ಪ್ರೆಸ್: ಕರ್ನಾಟಕದ ಕರಾವಳಿ ಜಿಲ್ಲೆ ಮಂಗಳೂರಿನಲ್ಲಿ 1931 ಅಕ್ಟೋಬರ್ 23 ರಂದು ಆರಂಭಗೊಂಡು ಸುದೀರ್ಘ 88 ವರ್ಷಗಳ ಕಾಲ ಸಾರ್ಥಕ ಸೇವೆ ನೀಡಿದ ವಿಜಯಾ ಬ್ಯಾಂಕ್ ಈಗ ಇತಿಹಾಸದ ಪುಟ ಸೇರಿದೆ. ಇಂದಿನಿಂದ ವಿಜಯಾ ಬ್ಯಾಂಕ್, ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಂಡಿದ್ದು ಇನ್ನು ಮುಂದೆ ಬ್ಯಾಂಕ್ ಆಫ್ ಬರೋಡಾ ಎಂದು ಕರೆಯಲಾಗುತ್ತದೆ. ಒಟ್ಟು 2,129 ಶಾಖೆಗಳನ್ನು ಹೊಂದಿದ್ದ ವಿಜಯಾ ಬ್ಯಾಂಕ್, ಕರ್ನಾಟಕದಲ್ಲಿಯೇ 583 ಶಾಖೆಗಳನ್ನು ನಿರ್ವಹಿಸುತ್ತಿತ್ತು. ಆರ್ಥಿಕವಾಗಿ ಸದೃಢವಾಗಿದ್ದರೂ ಸಹ ನಷ್ಟದಲ್ಲಿದ್ದ ದೇನಾ ಬ್ಯಾಂಕ್ ಜೊತೆಗೆ ವಿಜಯಾ ಬ್ಯಾಂಕ್ ಅನ್ನು  ಈಗ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ಮಾಡಲಾಗಿದೆ. ಇಂದಿನಿಂದಲೇ ವಿಜಯಾ ಬ್ಯಾಂಕ್ ಇದ್ದ ಕಟ್ಟಡಗಳ ಮುಂದೆ ಬ್ಯಾಂಕ್ ಆಫ್ ಬರೋಡಾ ಬೋರ್ಡ್ ಗಳು ರಾರಾಜಿಸಲಿವೆ. ವಿಜಯಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದ ಗ್ರಾಹಕರು ಮುಂದಿನ ದಿನಗಳಲ್ಲಿ ಚೆಕ್ ಬುಕ್, ಐ.ಎಫ್.ಎಸ್.ಸಿ. ಕೋಡ್ ಸೇರಿದಂತೆ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಸುದೀರ್ಘ ಇತಿಹಾಸ ಹೊಂದಿದ್ದ ಹೆಮ್ಮೆಯ ವಿಜಯಾ ಬ್ಯಾಂಕ್ ಈಗ ಇತಿಹಾಸದ ಪುಟ ಸೇರಿರುವುದು ರಾಜ್ಯದ ಜನತೆಗೆ ಬೇಸರ ತಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos