ಬೆಂಗಳೂರು, ಅ. 22 : ಬಿಎಂಟಿಸಿ ಬಸ್ಸನ್ನು ತನ್ನ ಮನೆ ಬಾಗಿಲಿಗೇ ಕರೆಸಿಕೊಂಡು 1 ಗಂಟೆಗಳ ಕಾಲ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಕಾಯಿಸಿದ ಪ್ರಸಂಗ ಇಂದು ನಡೆಯಿತು.
ಬಸ್ ಪ್ರಿಯಾರಿಟಿ ಲೇನ್ ಯೋಜನೆ ಜಾರಿ ಕುರಿತು ಪರಿಶೀಲನೆಗೆ ಸಾರಿಗೆ ಸಚಿವರು ನಗರ ಪ್ರದಕ್ಷಿಣೆ ಹಾಕುವ ಹಿನ್ನೆಲೆ ಬಸ್ಸನ್ನು ತಮ್ಮ ಮನಗೆ ಕರೆಸಿಕೊಂಡಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವೋಲ್ವೋ ಬಸ್ ಮನೆ ಮುಂದೆ ಬಂದು ನಿಂತಿತ್ತು.
ಬೆಳಗ್ಗೆ 8 ಗಂಟೆಗೆ ಜಹಮಹಾಲ್ ನ ತಮ್ಮ ಮನೆಯಿಂದ ಡಿಸಿಎಂ ಹೊರಟಿದ್ದಾರೆ. ತಾವು ಮನೆಯಿಂದ ಹೊರ ಬರುತ್ತಿದ್ದಂತೆಯೇ ಬಸ್ ರೆಡಿ ಇರಬೇಕು ಎಂದು ಡಿಸಿಎಂ ಸೂಚಿಸಿದ್ದರು. ಹೀಗಾಗಿ ವೋಲ್ವೋ ಬಸ್ 7 ಗಂಟೆಗೆನೇ ಮನೆ ಮುಂದೆ ಬಂದು ನಿಂತಿತ್ತು. ಬಸ್ ಬಂದ 1 ಗಂಟೆ ಬಳಿಕ ತಮ್ಮ ನಿವಾಸಕ್ಕೆ ಬಂದು ಸಚಿವರು ಬಸ್ ಹತ್ತಿದ್ದಾರೆ. ಬಸ್ ನಿಂತಿದ್ದ ರೋಡಲ್ಲಿ ವಾಕ್ ಮಾಡುವವರಿಗೂ ಸ್ವಲ್ಪ ಓಡಾಡೋಕೆ ಅಡಚಣೆ ಉಂಟಾಯಿತು.