ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಮೊದಲ ಅಭ್ಯರ್ಥಿಯನ್ನು ಘೋಷಿಸಿದ್ದು,
ಚಿಕ್ಕಬಳ್ಳಾಪುರದಿಂದ ಬಚ್ಚೇಗೌಡ ಹೆಸರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಫೈನಲ್
ಮಾಡಿ ಘೋಷಣೆ ಮಾಡಿದ್ದಾರೆ.
ಲೋಕಸಭಾ ಚುನಾವಣೆಗೆ ಒಂದೆಡೆ ಕಾಂಗ್ರೆಸ್ ಇನ್ನೊಂದೆಡೆ ಜೆಡಿಎಸ್ ತಯಾರಿಯಲ್ಲಿ ತೊಡಗಿದೆ. ಆದರೆ ಬಿಜೆಪಿಯು ನಾವೂ ಏನು ಕಮ್ಮಿ ಇಲ್ಲವೆಂಬಂತೆ ತಮ್ಮ ಮೊದಲ ಅಭ್ಯರ್ಥಿಯನ್ನು ಘೋಷಿಸಿದೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇಂದು ಬರ ಅಧ್ಯಯನ ಪ್ರವಾಸ ಕೈಗೊಂಡಿರುವ ಬಿಎಸ್ವೈ, ಮೊದಲು ಕೋಲಾರದ ಕುರುಡುಮಲೆ ದೇಗುಲಕ್ಕೆ ತೆರಳಿದರು. ದೇವಾಲಯಕ್ಕೆ ತೆರಳುವ ಮಾರ್ಗ ಮಧ್ಯೆ ಹೊಸಕೋಟೆಯಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಅವರು, ಚಿಕ್ಕಬಳ್ಳಾಪುರಕ್ಕೆ ಬಚ್ಚೇಗೌಡರ ಅಭ್ಯರ್ಥಿ ಎಂದು ಘೋಷಿಸಿದರು.