ಬಿಜೆಪಿ ಹಣ ಲೂಟಿ ಮಾಡಿ ದೇಶವನ್ನ ಕೊಳ್ಳೆ ಹೊಡೆಯುತ್ತಿದೆ: ಶಾಸಕ ಡಾ.ಯತೀಂದ್ರ

ಬಿಜೆಪಿ ಹಣ ಲೂಟಿ ಮಾಡಿ ದೇಶವನ್ನ ಕೊಳ್ಳೆ ಹೊಡೆಯುತ್ತಿದೆ: ಶಾಸಕ ಡಾ.ಯತೀಂದ್ರ

ಮೈಸೂರು, ಮಾ.21, ನ್ಯೂಸ್ ಎಕ್ಸ್ ಪ್ರೆಸ್: ಬಿಜೆಪಿ 5 ವರ್ಷದಿಂದ ಹಣ ಲೂಟಿ ಮಾಡಿ ದೇಶವನ್ನ ಕೊಳ್ಳೆ ಹೊಡೆಯುತ್ತಿರುವ ಪರಿಣಾಮ ಭಾರತ ಅವನತಿಯತ್ತ ಸಾಗುತ್ತಿದೆ ಅಂತಾ ಶಾಸಕ ಯತೀಂದ್ರ ಆರೋಪಿಸಿದ್ದಾರೆ.

ನಗರದಲ್ಲಿ ನಡೆದ ಚಾಮರಾಜನಗರದ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕ ಡಾ.ಯತೀಂದ್ರ, ಬಿಜೆಪಿ ಪಕ್ಷಕ್ಕೆ ಸಂವಿಧಾನದ ಮೇಲೆ‌ ನಂಬಿಕೆ ಇಲ್ಲ. ಅವರು ಬಂದಿರೋದೇ ಸಂವಿಧಾನ ಬದಲಾವಣೆ ಮಾಡಲು. ಇದನ್ನು ಬಿಜೆಪಿಯ ಕೆಲ ಮಂತ್ರಿಗಳೇ ಹೇಳುವಾಗ ಅವರ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು. 45 ವರ್ಷದಿಂದೀಚೆ ಈಗ ದೇಶದಲ್ಲಿ ಹೆಚ್ಚು ನಿರುದ್ಯೋಗಿಗಳು ಇದ್ದಾರೆ. ಕೇಂದ್ರದಲ್ಲಿ  ಬಿಜೆಪಿ ಆಡಳಿತ ಬಂದ ನಂತರ ಹಸಿವಿನಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ರಾಜ್ಯ ಸರ್ಕಾರ ಅನ್ನಭಾಗ್ಯ ಜಾರಿಗೆ ತಂದು  ಜನರನ್ನ ಹಸಿವು ಮುಕ್ತ ಮಾಡಿದೆ. ಬಿಜೆಪಿ ದೇಶದಲ್ಲಿರುವ ಮುಸ್ಲೀಮರಿಂದ ದೇಶಕ್ಕೆ ಅಪಾಯ ಎಂದು ಅಪಪ್ರಚಾರ ಮಾಡುತ್ತಿದೆ. ಬೇಕಾದಷ್ಟು ಹಣ ಇರುವುದರಿಂದ ಬೇಕಾಬಿಟ್ಟು ಜಾಹಿರಾತು ಕೊಡುತ್ತಿದ್ದಾರೆ. ಬಿಜೆಪಿಗೆ ಇಷ್ಟೊಂದು ದುಡ್ಡು ಎಲ್ಲಿಂದ ಬಂತು. ಅವರಿಂದ ದೇಶದ ಜನರಿಗೆ ಯಾವುದೇ ಅನುಕೂಲ ಆಗಿಲ್ಲ. ಬಿಜೆಪಿ ಯಾವತ್ತೂ ಶ್ರೀಮಂತರ ಹಾಗೂ ವ್ಯಾಪಾರಿಗಳ ಪರವಾಗಿದೆ ಎಂದು ಟೀಕಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos