ಹೊಸಕೋಟೆ, ಸೆ. 24: ರಾಜ್ಯದ ರಾಜಕೀಯದಲ್ಲಿ ಪ್ರತಿದಿನ ಒಂದಲ್ಲಾ ಒಂದು ಬದಲಾವಣೆ ನಡಿತಾನೇ ಇರುತ್ತೆ. ಹೌದು, ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅಥವಾ ಮಗನಿಗೆ ಟಿಕೆಟ್ ಹಿನ್ನಲೆ ಅಸಮಾಧಾನಗೊಂಡ ಸಂಸದ ಬಚ್ಚೇಗೌಡ ಬೆಂಬಲಿಗರು. ಬಚ್ಚೇಗೌಡ ಮಗ ಶರತ್ ಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಇಂದು ಸಿಎಂ ಯಡಿಯೂರಪ್ಪ ಮನೆಗೆ ದೌಡಾಯಿಸಿದ ಶರತ್ ಬೆಂಬಲಿಗರು.
ಇಂದು ಬೆಳಗ್ಗೆ ಏಳು ಗಂಟೆಗೆ ತಾಲೂಕು ಬಿಜೆಪಿ ಅಧ್ಯಕ್ಷ ಬೈರೇಗೌ
ಡ ಹಾಗೂ ಹುಲ್ಲೂರು ಮಂಜುನಾಥ್ ನೇತೃತ್ವದಲ್ಲಿ 250 ಕ್ಕೂ ಹೆಚ್ಚು ಬೆಂಬಲಿಗರು ಹೊಸಕೋಟೆಯಿಂದ ಬಿಎಸ್ ವೈ ಧವಳಗಿರಿ ನಿವಾಸದತ್ತ ಚಾಲನೆ ನೀಡಿದ್ದಾರೆ
ಶರತ್ ಬಚ್ಚೇಗೌಡ ರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಸಿಎಂಗೆ ಮನವಿ ಮಾಡಲಿರುವ ಬೆಂಬಲಿಗರು. ಸಿಎಂಗೆ ತಲೆನೊವ್ವಾದ ಹೊಸಕೋಟೆ ಉಪಚುನಾವಣೆ ಕಣ. ಯಾರಿಗೆ ಟಿಕೆಟ್ ಯಾರು ಮನೆ ಕಾದು ನೋಡಬೇಕು.