ಕೋಲ್ಕತಾ, ಮೇ. 14, ನ್ಯೂಸ್ ಎಕ್ಸ್ ಪ್ರೆಸ್ : ಬಿಜೆಪಿ ವಿರುದ್ಧ ಕೆಂಡಕಾರುವ ಪಶ್ಚಿಮ ಬಂಗಾಳ ಸಿಎಂ, ಬಿಜೆಪಿ ಬಗ್ಗೆ ಹೇಳಿಕೆ ನೀಡಿ ಅಚ್ಚರಿಯ ಮೂಡಿಸಿದ್ದಾರೆ.ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಮಮತಾ ಬ್ಯಾನರ್ಜಿ, ಈ ಬಾರಿ ಬಿಜೆಪಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿದ್ದಾರೆ.
ಬಿಜೆಪಿ 125 ರಿಂದ 150 ಸೀಟ್ ಗಳನ್ನು ಗೆಲ್ಲಬಹುದು ಎಂದಿದ್ದಾರೆ. ಅಲ್ಲದೆ, ಮಮತಾ ದೀದಿ ಪ್ರಕಾರ ಕಾಂಗ್ರೆಸ್ ಕೂಡ 123ರಿಂದ 130 ಸೀಟ್ ಗಳಲ್ಲಿ ಗೆಲುವು ಆಗಬಹುದಂತೆ. ಇನ್ನೂ ಬಿಜೆಪಿ ಪಕ್ಷವೊಂದೆ,ದೆಹಲಿಯಲ್ಲಿ ಗದ್ದುಗೆ ಏರಲು ಸಾಧ್ಯವಾಗಲ್ಲ ಎಂದಿರುವ ದೀದಿ, ಸರ್ಕಾರ ರಚನೆಯಲ್ಲಿ ಸ್ಥಳೀಯ ಪಕ್ಷಗಳ ಪಾತ್ರ ಬಹುಮುಖ್ಯ ಎಂದು ಹೇಳಿದ್ದಾರೆ.