ಕೋಲ್ಕತ್ತಾ , ಮೇ. 25 , ನ್ಯೂಸ್ ಎಕ್ಸ್ ಪ್ರೆಸ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ಬಿಜೆಪಿ ಗೆಲುವನ್ನು ವಿರೋಧಿಸಿ ತಮ್ಮ ಕವಿತೆಯ ಸಾಲು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಬಿಜೆಪಿಯ ಗೆಲುವನ್ನು ವಿರೋಧಿಸಿ ಕವಿತೆಯ ಮೂಲಕ ಅಸಮಾಧಾನ ವ್ಯಕ್ತಪಡಿಸಿ ಅವರು, ಬಣ್ಣದ ಕೋಮುವಾದಿಯನ್ನು ನಾನು ಒಪ್ಪುವುದಿಲ್ಲ. ಪ್ರತಿ ಧರ್ಮದಲ್ಲಿ ಸಹಿಷ್ಣುತೆ, ಆಕ್ರಮಣಶೀಲತೆ ಇರುತ್ತದೆ. ಆದ್ರೆ, ಬಂಗಾಳದಲ್ಲಿ ಬೆಳೆದ ನಾನು ಶಾಂತವಾದ ಪುನರ್ ಜೀವನದ ಸೇವಕಿಯಾಗಿದ್ದೇನೆ. ಧರ್ಮದ ಹೆಸರಲ್ಲಿ ಆಕ್ರಮಣಶೀಲತೆ ಮಾರುವುದನ್ನು ನಾನು ಒಪ್ಪುವುದಿಲ್ಲ ಎಂದು ಬರೆದಿದ್ದಾರೆ.
‘ದೀದಿ’ ಒಪ್ಪಿಕೊಂಡಿಲ್ಲ ಸೋಲು
ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ದೇಶದಲ್ಲಿ ಬಿಜೆಪಿ ಡೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಭರ್ಜರಿ ಗೆಲುವು ಪಡೆದಿರುವುದನ್ನು ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇನ್ನೂ ಒಪ್ಪಿಕೊಂಡಂತೆ ಕಾಣುತ್ತಿಲ್ಲ. ಬಿಜೆಪಿ ಚುನಾವಣಾ ಪ್ರಚಾರದ ವೇಳೆ ಜೈ ಶ್ರೀರಾಮ್ ಘೋಷಣೆ ಮತ್ತು ಹಿಂದೂ ಧರ್ಮದ ಆಚರಣೆ ಮಾಡಲು ಬಿಡುವುದಿಲ್ಲ ಎಂಬ ಆರೋಪವನ್ನು ನಮ್ಮ ವಿರುದ್ಧ ಬಿಜೆಪಿ ಮಾಡಿತ್ತು. ಹೀಗಾಗಿ ನಾವು ಹೆಚ್ಚಿನ ಕ್ಷೇತ್ರಗಳಲ್ಲಿ ಸೋಲಬೇಕಾಯಿತು ಎಂಬುದನ್ನ ಕವಿತೆಯ ಮೂಲಕ ಮಮತಾ ಬ್ಯಾನರ್ಜಿ ಹೇಳೋಕೆ ಪ್ರಯತ್ನಿಸಿದ್ದಾರೆ.