ಬಾಗಲಕೋಟೆ, ಮೇ. 24, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ನಗರದ ಲಕ್ಕಿ ಹೇರ್ ಕಟಿಂಗ್ ಸಲೂನ್ ಮಾಲೀಕ ಸುನೀಲ್ ಶಹಪೂರ್ ಸಹೋದರರ ತಂಡ ಉಚಿತ ಕ್ಷೌರ ಮಾಡುವುದರ ಮೂಲಕ ಬಾಗಲಕೋಟೆ ಜಿಲ್ಲೆಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.
ಕಟಿಂಗ್ ಸಲೂನ್ ಮಾಲೀಕ ಸುನೀಲ್ ಶಹಪೂರ್ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಉಚಿತ ಕಟಿಂಗ್ ಹಾಗು ಶೇವಿಂಗ್ ಮಾಡುವುದಾಗಿ ಶಹಪೂರ್ ಬ್ರದರ್ಸ್ ತಮ್ಮ ಅಂಗಡಿಯ ಮುಂದೆ ಬ್ಯಾನರ್ ಹಾಕಿದ್ದಾರೆ. ಬಿಜೆಪಿ ಪಕ್ಷ ದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಶಹಪೂರ್ ಅವರ ಈ ಅಭಿಮಾನದ ಕಾರ್ಯ ಸಾರ್ವಜನಿಕರ ಗಮನಕ್ಕೆ ಬರುತ್ತಿದ್ದಂತೆ ಬೆಳಿಗ್ಗೆಯುಂದಲೇ ಗ್ರಾಹಕರು ಉಚಿತ ಕ್ಷೌರ ಮಾಡಿಕೊಳ್ಳಲು ಮುಗಿಬಿದ್ದಿದ್ದಾರೆ.