ನವದೆಹಲಿ, ಮೇ. 20, ನ್ಯೂಸ್ ಎಕ್ಸ್ ಪ್ರೆಸ್ : ರಾಜ್ಯದ ಬಿಜೆಪಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ. ನಾನು ಇಂಥ ಎಕ್ಸಿಟ್ ಪೋಲ್ ಎಂಬ ಗಾಸಿಪ್ ಗಳನ್ನು ನಂಬುವುದಿಲ್ಲ. ಇದೊಂದು ಗೇಮ್ ಪ್ಲಾನ್. ಇವಿಎಂ ಮಷಿನ್ಗಳನ್ನು ಬದಲಾಯಿಸುವ ತಂತ್ರ ಇದ್ದರ ಹಿಂದೆ ಇದ್ದರೂ ಇರಬಹುದು ಎಂದು ಎದುರಾಳಿ ಪಕ್ಷ ಬಿಜೆಪಿಗೆ ಟ್ವೀಟ್ ಮಾಡಿದ್ದಾರೆ.
ರಾಜ್ಯದ ಬಿಜೆಪಿಗೆ ಟ್ವೀಟ್ ಮಾಡಿದ ಮಮತ ಬ್ಯಾನರ್ಜಿ, ನಿಮಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ನಿಮಗೆ ‘ರಸಗುಲ್ಲ’ ಕಳಿಸಿಕೊಡುತ್ತೇವೆ.ಇದಕ್ಕೆಲ್ಲ ಹೆದರದೇ ಶಕ್ತಿಶಾಲಿಯಾಗಿ, ಧೈರ್ಯಯುತವಾಗಿ ಒಂದಾಗಿ ನಿಲ್ಲಬೇಕು ಎಂದು ಮಮತಾ ಟ್ವೀಟ್ ಮಾಡಿದ್ದಾರೆ.