ಕೋಲ್ಕತಾ, ಆ. 3 : ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಸಮೀಸುತ್ತಿರು ಹಿನ್ನಲೆ ‘ಚುನಾವಣಾ ಚಾಣಕ್ಯ’ ಪ್ರಶಾಂತ್ ಕಿಶೋರ್ ಮಮತಾ ಬ್ಯಾನರ್ಜಿ ಅವರಿಗೆ ನೀಡಿರುವ ಐಡಿಯಾ ಕೆಲಸ ಮಾಡುವ ಸೂಚನೆ ನೀಡಿದೆ.
ಬಿಜೆಪಿಯ ಸೆಳೆತಕ್ಕೆ ಒಳಗಾಗುತ್ತಿರುವ ಜನರನ್ನು ಹಿಡಿದಿಟ್ಟುಕೊಳ್ಳಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರಂಭಿಸಿರುವ ‘ದೀದಿಗೆ ಹೇಳಿ’ ಯೋಜನೆಯಡಿ ಪ್ರಶಾಂತ್ ಕಿಶೋರ್ ನಡೆಸುತ್ತಿರುವ ಐ-ಪ್ಯಾಕ್ ಕಾಲ್ ಸೆಂಟರ್ಗೆ ಕರೆಗಳ ಮಹಾಪೂರವೇ ಹರಿದುಬರುತ್ತಿದೆ. ಮೂರು ದಿನಗಳಲ್ಲಿಯೇ ಸಾವಿರಾರು ಮಂದಿ ಈ ಸಹಾಯವಾಣಿಗೆ ಕರೆ ಮಾಡಿ ತಮ್ಮ ಅಭಿಪ್ರಾಯ, ದೂರು ಹಂಚಿಕೊಂಡಿದ್ದಾರೆ.