ಹುಬ್ಬಳ್ಳಿ, ಜ. 21: ಅಂತರಾಷ್ಟ್ರೀಯ ಗಾಳಿ ಪಟ ಉತ್ಸವದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂದು ಹಾಡಿ ನೆರೆದಿದ್ದ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕ್ಷಮತಾ ಸಂಸ್ಥೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ 2 ದಿನಗಳ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಮೊದಲ ದಿನ ಖ್ಯಾತ ಸಂಗೀತಗಾರ ವಿಜಯ ಪ್ರಕಾಶ, ಅರ್ಚನಾ ಉಡುಪಾ ಹಾಗೂ ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಂಗೀತಗಾರ ವಿಜಯ ಪ್ರಕಾಶ ಹಾಗೂ ಅವರ ತಂಡ ಕನ್ನಡದ ಹೊಸ ಹಾಗೂ ಹಳೆಯ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಮನರಂಜಿಸಿದ್ದರೇ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಡಾ. ರಾಜಕುಮಾರ ಅಭಿನಯದ ಶಬ್ದವೇದಿ ಸಿನಿಮಾದ ಹುಟ್ಟಿದರೇ ಕನ್ನಡನಾಡಿನಲ್ಲಿ ಹುಟ್ಟಬೇಕು ಹಾಡನ್ನು ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆಗಳ ಸುರಿಮಳೆಗೈದರು. ಒಟ್ಟಿನಲ್ಲಿ ಕೇಂದ್ರ ಸಚಿವರು ತಮ್ಮ ರಾಜಕೀಯ ಕೆಲಸದಲ್ಲಿ ಎಷ್ಟೇ ಬ್ಯುಜಿ ಇದ್ದರೂ ಕೂಡಾ ಸಮಯ ಸಿಕ್ಕರೇ ಹಾಡಲು ಕೂಡಾ ಸಿದ್ದ ಎಂದು ತೋರಿಸಿದ್ದು ವಿಶೇಷವಾಗಿತ್ತು.