ಕೆ.ಆರ್ ಪುರ, ಆ. 23: ಕ್ಷೇತ್ರದ ರಾಮಮೂರ್ತಿನಗರ ವಾಡ್೯ನ ಎನ್ ಆರ್ ಐ ಬಡಾವಣೆಯಲ್ಲಿ ಮಾಜಿ ಶಾಸಕ ಬೈರತಿ ಬಸವರಾಜ್ ನೇತೃತ್ವದಲ್ಲಿ ಗೌರಿಗಣೇಶ ಹಬ್ಬ ಪ್ರಯುಕ್ತ ಪುಣ್ಯಭೂಮಿ ಸೇವಾ ಫೌಂಡೇಶನ್ ಅಧ್ಯಕ್ಷೆ ಶಾಂತಾ ಕೃಷ್ಣಮೂರ್ತಿ ರವರು ಮಹಿಳೆಯರಿಗೆ ಬಾಗಿನ ರೂಪದಲ್ಲಿ ಅರಿಶಿನ ಕುಂಕುಮ ಬೆಳೆಗಳ ಯೊಂದಿಗೆ ಸೀರೆಯನ್ನು ವಿತರಿಸಿದರು.
ನಂತರ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಬೈರತಿ ಬಸವರಾಜುರವರು ಕ್ಷೇತ್ರದ ಸಾಕಷ್ಟು ಅನುಧಾನಗಳನ್ನು ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಜನರ ಹಿತ ದೃಷ್ಟಿಯಿಂದ ಅಭಿವೃದ್ಧಿ ಕೆಲಸಗಳ ಜೊತೆಗೆ ಹಿಂದು, ಮುಸಲ್ಮಾನ, ಕ್ರಿಶ್ಚಿಯನ್ ನ್ನರ ಹಬ್ಬ ಹರಿದಿನಗಳಲ್ಲಿ ತಮ್ಮ ಸ್ವಂತ ವೆಚ್ಚದಲ್ಲಿ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಪ್ರತಿ ವರ್ಷದಂತೆ ಕ್ಷೇತ್ರ ವ್ಯಾಪ್ತಿ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಬಾಗಿನ ನೀಡುತ್ತಾರೆ. ರಾಮಮೂರ್ತಿನಗರ ವಾಡ್೯ನ 10 ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಬಸವರಾಜ್ ನೇತೃತ್ವದಲ್ಲಿ ಬಾಗಿನ ನೀಡಲಾಗಿದೆ ಎಂದರು, ಇವರ ಪ್ರೇರೇಪಣೆಯಿಂದ ನಮ್ಮ ಪುಣ್ಯಭೂಮಿ ಪೌಂಡೇಶನ್ ವತಿಯಿಂದಲು ವಾಡ್೯ನಲ್ಲಿ ಮಹಿಳೆಯರಿಗೆ ಟೈಲರಿಂಗ್, ಕಂಪ್ಯೂಟರ್ ತರಭೇತಿ ಸೆಂಟರ್ಗಳು, ಸಂಘಸಂಸ್ಥೆಗಳಿಗೆ ಪ್ರೋತ್ಸಾಹ ಧನ ಹೀಗೆ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಬಂದಿದ್ದೇವೆ ಎಂದರು. ರಾಜ್ಯದ ವಿವಿಧ ಕಡೆ ನೆರೆ ಪ್ರವಾಹ ಉಂಟಾಗಿ ತೊಂದರೆಯಲ್ಲಿದ್ದ ಸಂತ್ರಸ್ತರಿಗೂ ಒಂದು ವಾರದ ಕಾಲ ಅಗತ್ಯ ವಸ್ತುಗಳಾದ ಬಕೆಟ್, ಪಾತ್ರೆ, ಚಾಪೆ, ಕೊಬ್ಬರಿ ಎಣ್ಣೆ, ಅಕ್ಕಿ, ಬೆಳೆ, ಬೆಲ್ಲ, ಹಿರಿಯರಿಗೆ ಮತ್ತು ಮಕ್ಕಳಿಗೆ ಹೊಸ ಬಟ್ಟೆಗಳು, ಮೆಡಿಕಲ್ ವಸ್ತುಗಳು ಸೇರಿದಂತೆ ಒಟ್ಟು ಹತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ನೇರವಾಗಿ ಸಂತ್ರಸ್ತರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಕನ್ನಡ ಸಹಿತ್ಯ ಪರಿಷತ್ ಅಧ್ಯಕ್ಷ ಕೆ. ಕೃಷ್ಣಮೂರ್ತಿ, ವಾಡ್೯ ಅಧ್ಯಕ್ಷ ಮಧುಗೌಡ, ಬೀರಪ್ಪ, ಅಫ್ರೊಜ್, ಸುಬ್ರಮಣಿ, ಕೇಬಲ್ ಹರೀಶ್, ಲಕ್ಷ್ಮಿ ಹರೀಶ್, ಸತೀಶ್, ಆನಂದ್, ಮುನಿರಾಜ ಮತ್ತಿತರರು ಇದ್ದರು.