ಬೆಂಗಳೂರು, ಅ. 16: ಕನ್ನಡದ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಹೌದು, ಕನ್ನಡದ ಬಿಗ್ ಬಾಸ್ ಈಗ 7ನೇ ಆವೃತ್ತಿ ಆರಂಭಗೊಂಡಿದೆ. ಆರಂಭದಲ್ಲೇ ಮನೆಯಲ್ಲಿ ಅಸಮಾಧನಗಳೂ ಹುಟ್ಟಿಕೊಳ್ಳುತ್ತಿವೆ. ಇದಕ್ಕೆ ತಾಜಾ ಉದಾಹರಣೆ ದೀಪಿಕಾ ದಾಸ್ ಹಾಗೂ ರಾಜು ತಾಳಿಕೋಟೆ ನಡುವಣ ವಾಗ್ವಾದ.
2ನೇ ದಿನ ಮಧ್ಯಾಹ್ನ ಎಲ್ಲರೂ ಮನೆ ಒಳಗೆ ಹೋಗುತ್ತಿದ್ದರು. ಈ ವೇಳೆ ದೀಪಿಕಾ ದಾಸ್ ಅವರ ಬೆನ್ನಿಗೆ ಹೊಡೆದು ಒಳ ಬರುವಂತೆ ಸೂಚಿಸಿದ್ದಾರೆ ರಾಜು ತಾಳಿಕೋಟೆ. ಈ ವೇಳೆ ದೀಪಿಕಾ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ, ಮುಂದೆ ಈ ರೀತಿ ಮಾಡಬೇಡಿ ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಮುಂದೆ ಬರುವ ನಿಮ್ಮ ಗಂಡ ಹೊಡೆದರೆ ಎಂದು ರಾಜು ಪ್ರಶ್ನೆ ಮಾಡಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ದೀಪಿಕಾ, ‘ಗಂಡಸಿಗೆ ಹೊಡೆಯುವ ಹಕ್ಕನ್ನು ಯಾರು ಕೊಟ್ಟಿದ್ದಾರೆ? ಹಾಗೆ ಹೊಡೆಯುವವನು ಗಂಡಸೇ ಅಲ್ಲ. ಅವರು ಮಾತಿನಲ್ಲಿ ಬುದ್ಧಿ ಹೇಳಲಿ. ಆದರೆ, ಹೊಡೆಯಬಾರದು’ ಎಂದಿದ್ದಾರೆ. ಈ ವಿಚಾರ ಇಬ್ಬರ ನಡುವೆ ಚಿಕ್ಕ ವೈಮನಸ್ಯ ಹುಟ್ಟು ಹಾಕಿದೆ.