ಬುದ್ಧಿವಂತ 2 ಚಿತ್ರಕ್ಕೆ ಉಪ್ಪಿ ರೆಡಿ

ಬುದ್ಧಿವಂತ 2 ಚಿತ್ರಕ್ಕೆ ಉಪ್ಪಿ ರೆಡಿ

ಬೆಂಗಳೂರು, ಸೆ. 1 : ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರೋ ಐ ಲವ್ ಯೂ ಚಿತ್ರ ರಿಯಲ್ ಸ್ಟಾರ್ ಉಪೇಂದ್ರ ಪಾಲಿಗೆ ಭರಪೂರ ಗೆಲುವು ಲಭಿಸಿದೆ. ಯಶಸ್ವಿಯಾಗಿ ನೂರು ದಿನ ಪೂರೈಸಿಕೊಳ್ಳುವ ಸೂಪರ್ ಹಿಟ್ ಚಿತ್ರವಾಗಿಯೂ ದಾಖಲಾಗಿದೆ. ಉಪೇಂದ್ರ ಸದ್ಯ ಬುದ್ಧಿವಂತ 2 ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಎಂದೂ ನೋಡಿರದಂಥಾ ಗೆಟಪ್ಪಿನಲ್ಲಿ ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡಲು ಉಪ್ಪಿ ರೆಡಿಯಾಗಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ. ಉಪೇಂದ್ರ ಸಿನಿಮಾಗಳೆಂದ ಮೇಲೆ ಆರಂಭಿಕವಾಗಿಯೇ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟಿಕೊಳ್ಳುತ್ತೆ. ಉಪ್ಪಿ ಫ್ಲೇವರಿನ ಒಂದಷ್ಟು ಪ್ರಯೋಗಗಳಾದರೂ ಗ್ಯಾರೆಂಟಿ ಎಂಬ ನಂಬಿಕೆ ಅಭಿಮಾನಿಗಳಲ್ಲಿದೆ.

ಫ್ರೆಶ್ ನ್ಯೂಸ್

Latest Posts

Featured Videos