ಕೆ.ಆರ್.ಪುರ, ಜ. 27: ಹನುಮಂತ ವಿಗ್ರಹ ಸ್ಥಾಪನೆಯಿಂದ ಭಾರತಕ್ಕೆ ಶುಭ ಸೂಚಕವಾಗಲಿದೆ ಎಂದು ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
ಶ್ರೀರಾಮ ಚೈತನ್ಯ ವರ್ಧಿನಿ ಟ್ರಸ್ಟ್ ಹಾಗೂ ಬೃಹದ್ರೂಪಿ ಹನುಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ 63 ಅಡಿ ಏಕಶಿಲಾ ವಿಗ್ರಹ ಬೃಹದ್ರೂಪಿ ಹನುಮಾನ್ ವಿಗ್ರಹ ಪ್ರತಿಷ್ಟಾಪನೆ ಗೆ ತಳಪಾಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 30 ವರ್ಷಗಳ ಹಿಂದೆ ಇಲ್ಲಿ ಕಾಸಾಯಿ ಖಾನೆ ನಿರ್ಮಾಣವನ್ನು ವಿರೋಧಿಸಿ ಪ್ರತಿಭಟನೆ ಮಾಡಲಾಗಿತ್ತು ಅದರ ಫಲವೇ ಹನುಮಂತ ವಿಗ್ರಹ ಸ್ಥಾಪನೆ ಎಂದು ಹೇಳಿದರು.
ಹನುಮಂತ ಬಂದ ಮೇಲೆ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಕಾರಣ, ಕರ್ನಾಟಕದಲ್ಲಿ ಹನುಮಂತ ಮೂಲ ಸ್ಥಾನದಲ್ಲಿ ನಿರ್ಮಾಣವಾದ ಮೇಲೆ ಅಯೋಧ್ಯೆ ಮೂಲ ಸ್ಥಾನದಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.ರಾಜ್ಯ ಹಾಗೂ ರಾಷ್ಟ್ರದಲ್ಲಿ ಶ್ರವಣಬೆಳಗೊಳ ಬಿಟ್ಟರೆ ಇದೇ ಬೃಹತ್ ಏಕಶಿಲಾ ವಿಗ್ರಹವಾಗಿದೆ. 65 ಅಡಿಯಿಂದ ಕಲ್ಲು ಬಂಡೆ ಕೆತ್ತನೆ ಮಾಡಿ ತರಲಾಗಿದೆ. ಮೂರು ಪ್ರಮುಖ ಖಾಸಗಿ ಕಂಪನಿಗಳು ದೇವಾಲಯ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ ಎಂದರು.
ಮಾಜಿ ಸಚಿವ ಶಾಸಕ ಜಾರ್ಜ್ ಮಾತನಾಡಿ, ಧರ್ಮ ಯಾವುದೇ ಇರಲ್ಲಿ ಏಲ್ಲಾ ಧರ್ಮವಂದಿಸಬೇಕು ನಾವು ಶಾಂತಿದೂತರು, 46 ಗುಂಟೆ ಜಾಗ ದೇವಾಲಯಕ್ಕೆ ನೀಡಲಾಗಿದೆ ಎಂದು ಹೇಳಿದರು. ಸರ್ವಜ್ಞ ನಗರ ಒರತು ಪಡಿಸಿದರೆ ಇಲ್ಲಿ ಮೂಲಭೂತ ಸೌಲಭ್ಯವಿಲ್ಲ ಕಾಲೇಜ್, ಆಸ್ಪತ್ರೆ , ಕ್ರೀಡಾಂಗಣ ಸೇರಿದಂತೆ ದೇವಾಲಯ ನಿರ್ಮಾಣ ಮಾಡುವ ಮೂಲಕ ಕ್ಷೇತ್ರದ ಜನತೆಗೆ ಮೂಲಭೂತ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
ಮಾಜಿ ಸಚಿವ ಆರ್.ಶಂಕರ್ ಮಾತನಾಡಿ, ಹನುಮಂತನ ವಿಗ್ರಹ ಶೀಘ್ರವೇ ಪ್ರತಿಷ್ಟಾಪನೆ ಆಗಿ ಎಲ್ಲರ ದರ್ಶನಕ್ಕೆ ಅನುವು ಮಾಡಿಕೊಟ್ಟು ಪುಣ್ಯಪಲಿಸಲಿ ಎಂದು ಹೇಳಿದರು.
ಈ ಸಂದರ್ಬದಲ್ಲಿ ಚುಂಚನಗಿರಿ ಮಠದ ಶ್ರೀ ಶ್ರೀ ನಿರ್ಮಲಾನಂದ್ ಸ್ವಾಮಿಜಿ, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಶಾಸಕ ವಿಶ್ವನಾಥ್, ಬೈರತಿ ಸುರೇಶ್, ಟ್ರಸ್ಟ್ ನ ಅಧ್ಯಕ್ಷ ಎಂ.ಎನ್.ರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಹೆಚ್.ಎಂ ರಮೇಶ್ ಗೌಡ, ಪಾಲಿಕೆ ಸದಸ್ಯ ಪದ್ಮನಾಭರೆಡ್ಡಿ, ನಂದಾ, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮುನಿರಾಜ್ ಕಾರ್ಣಿಕ್, ಮುಖಂಡರು ಮತ್ತಿತರರಿದ್ದರು.