ನವದೆಹಲಿ, ಸೆ. 24 : ಭಾರತಕ್ಕೆ ಸೈಕ್ಲೋನ್ ಎಂಟ್ರಿ ಕೊಟ್ಟಿದೆ. ವಾಯು, ಗಜ, ಪೋನಿ ಚಂಡಮಾರುತಗಳ ಬಳಿಕ ಭಾರತಕ್ಕೆ ಹಿಕಾ ಸೈಕ್ಲೋನ್ ಆಗಮಿಸಿದೆ. ಇಂದು ರಾತ್ರಿ ವೇಳೆಗೆ ಹಿಕಾ ಚಂಡಮಾರುತ ಓಮನ್ ಕರಾವಳಿ ದಾಟಿ, ಭಾರತ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರಾವಳಿ ತೀರದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಸೆ. 23 ರಿಂದ ಸೆಪ್ಟೆಂಬರ್ 25 ರವರೆಗೆ ಈಶಾನ್ಯ ಅರೇಬಿಯನ್ ಸಮುದ್ರ, ಗುಜರಾತ್ ಕರಾವಳಿ, ವಾಯುವ್ಯ ಅರೇಬಿಯನ್ ಸಮುದ್ರಕ್ಕೆ ಹೋಗದಂತೆ ಮೀನುಗಾರರಿಗೆ ಸೂಚಿಸಲಾಗಿದೆ.