ಬೆಂಗಳೂರು, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು. ಇನ್ನೊಂದು ಕಡೆ ರಾಜಾಜಿನಗರ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಆರ್ಷದ್ ಪ್ರಚಾರ ನಡೆಸಿದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಷೋ ನಡೆಸಿದರೆ, ರಾಜಾಜಿನಗರ ಹಾಗೂ ಶಿವಾಜಿನಗರ ಕ್ಷೇತ್ರಗಳಲ್ಲಿ ಬೆಂಗಳೂರು ಕೇಂದ್ರ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಆರ್ಷದ್ ಅಬ್ಬರದ ಪ್ರಚಾರ ನಡೆಸಿದರು. ಈ ವೇಳೆ ವಿರೋಧಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಬಗ್ಗೆ ಮಾತನಾಡಿದ ಹರಿಪ್ರಸಾದ್, ಗುರು ನರೇಂದ್ರ ಮೋದಿಯವರೂ ಕೂಡಾ ಐದು ವರ್ಷದಲ್ಲಿ ಒಂದೇ ಒಂದು ಸುದ್ದಿಗೋಷ್ಠಿ ನಡೆಸಿಲ್ಲ. ಪ್ರಜಾಪ್ರಭುತ್ವದ ತತ್ವ ಸಿದ್ಧಾಂತದ ವಿರುದ್ಧವಾಗಿರೋರು ಇದೆಲ್ಲ ಮಾಡೋದು ಸಹಜ ಎಂದು ತೇಜಸ್ವಿ ಸೂರ್ಯ ಅವರು ಮಾಧ್ಯಮ ನಿರ್ಬಂಧ ಆಜ್ಞೆ ತಂದ ವಿಚಾರವಾಗಿ ಮಾತನಾಡಿದರು. ನಮ್ಮ ಸ್ಪರ್ಧೆ ಭಾರತೀಯ ಜನತಾ ಪಾರ್ಟಿಯ ವಿರುದ್ಧ. ಪ್ರಧಾನಿ ಮೋದಿ ಐದು ವರ್ಷದಲ್ಲಿ ಜನರನ್ನು ಮೂರ್ಖರನ್ನಾಗಿ ಮಾಡಿದ್ದಾರೆ. ಸಂವಿಧಾನ ಬದಲಾಯಿಸುತ್ತೇವೆ ಅಂತಿದ್ದಾರೆ. ಇದರ ವಿರುದ್ಧವಾಗಿ ನಾವು ಪ್ರಚಾರ ನಡೆಸಿ ಜನರ ಮತಯಾಚನೆ ಮಾಡುತ್ತಿದ್ದು, ಜನರು ಹಾಗೂ ಕಾರ್ಯಕರ್ತರ ಉತ್ಸಾಹ ಚೆನ್ನಾಗಿದೆ. ಹಾಗಾಗಿಯೇ ಅಬ್ಬರದ ಪ್ರಚಾರ ನಡೆಸಿದ್ದೇವೆ ಎಂದರು.
ಇನ್ನೊಂದು ಕಡೆ ರಾಜಾಜಿನಗರ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ರಿಜ್ವಾನ್ ಆರ್ಷದ್ ತಮಗೆ ಮತ ಹಾಕುವಂತೆ ಮನವಿ ಮಾಡಿದರು. ಪ್ರಕಾಶನಗರ, ಮರಿಯಪ್ಪನಪಾಳ್ಯ, ಚಾಮುಂಡಿ ನಗರ, ರಾಮಮಂದಿರ, ಶಿವನಗರ, ಭಾಷ್ಯಂ ಸರ್ಕಲ್, ಕಾಮಾಕ್ಷಿಪಾಳ್ಯ, ಬಸವೇಶ್ವರ ನಗರ ಹಾಗೂ ಶಿವಾಜಿನಗರದ ರಸೆಲ್ ಮಾರ್ಕೆಟ್, ಹಲಸೂರು, ಎಂ.ವಿ.ಗಾರ್ಡನ್ ಸೇರಿದಂತೆ ಹಲವೆಡೆ ರೋಡ್ ಶೋ ಮೂಲಕ ಪ್ರಚಾರ ನಡೆಸಿದರು.