ಇಸ್ಲಮಾಬಾದ್ , ಆ. 25 : ಭಾರತದ ವಿರುದ್ಧ ಪಾಕ್ ರಾಷ್ಟ್ರಾಧ್ಯಕ್ಷ ಅರಿಫ್ ಅಲ್ವಿ ವಾಗ್ದಾಳಿ ನಡೆಸಿದ್ದಾರೆ. ಜಮ್ಮುಕಾಶ್ಮೀರದ 370 ವಿಧಿ ರದ್ದು ಮಾಡಿದ ಬಳಿಕ ಅಲ್ಲಿನ ಕೇಂದ್ರ ಸರ್ಕಾರ ಅಭಿವೃದ್ಧಿ ಮಾಡಬಹುದು ಎಂದು ಯೋಚಿಸಿದರೆ ಅದು ಕೇವಲ ಭ್ರಮೆಯಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಭದ್ರತಾ ಮಂಡಳಿಯ ಹಲವು ನಿರ್ಣಯಗಳನ್ನು ಭಾರತ ನಿರ್ಲಕ್ಷ್ಯ ಮಾಡಿದೆ. ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಲು ಪಾಕಿಸ್ತಾನದೊಂದಿಗೆ ಮಾತುಕತೆಗೆ ಬಾರದೆ ತಿರಸ್ಕಾರ ಮಾಡುತ್ತಿದೆ.