ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ!

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಹೆಚ್ಚಿದ ಟ್ರಾಫಿಕ್ ಸಮಸ್ಯೆ ಇದರಿಂದ ಕೆಲಸಕ್ಕೆ ಹೊಗುವವರು ಹಾಗೂ ಶಾಲೆಗೆ ಹೊಗುವವರಗೆ ಇದರಿಂದ ಭಾರಿ ಸಮಸ್ಯೆ ಉಂಟಾಗಿದೆ. ಇದರಿಂದ ದಿನ ನಿತ್ಯ ಜನರ ಸಮಸ್ಯೆ ಹೆಳತೀರಲಾಗದು.
ಐಟಿ ಸಿಟಿ ಬೆಂಗಳೂರಿನ ಸಂಚಾರ ದಟ್ಟಣೆ ಮತ್ತು ನಿಧಾನಗತಿಯ ವಾಹನ ಸಂಚಾರಕ್ಕೆ ಬಹುಶಃ ಬೆಂಗಳೂರಿಗೆ ಕಾಲಿಟ್ಟವರು ಅದರ ನರಕಯಾತನೆಯನ್ನು ಅನುಭವಿಸದೆ ಇರಲಿಕ್ಕಿಲ್ಲ ಎನಿಸುತ್ತದೆ. ನಿತ್ಯ ಬೆಂಗಳೂರಿನಲ್ಲಿ ಸಂಚರಿಸುವವರ ಪಾಡಂತೂ ಹೇಳತೀರದು.
ಈ ಸಮಸ್ಯೆಗೆ ಪರಿಹಾರವಾಗಿ ವಾಹನಗಳ ಮೇಲೆ ‘ದಟ್ಟಣೆ ಶುಲ್ಕ’ ವಿಧಿಸುವ ಕಲ್ಪನೆಯನ್ನು ಮೊಬಿಲಿಟಿ ತಜ್ಞರು ಮುಂದಿಟ್ಟಿದ್ದಾರೆ. ಸಾರ್ವಜನಿಕರ ಮೇಲೆ ಹೇರುವ ಶುಲ್ಕವನ್ನು ಸಾರ್ವಜನಿಕ ಸಾರಿಗೆಯನ್ನು ಒದಗಿಸಲು ಮತ್ತು ಸುಧಾರಿಸಲು ಬಳಸಬೇಕು ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ, ಅದರಲ್ಲೂ ವಿಶೇಷವಾಗಿ ಕಳೆದ ವಾರದ ಹೊರ ವರ್ತುಲ ರಸ್ತೆ (ORR) ನಲ್ಲಿ ಒಂದೂವರೆ ಗಂಟೆಗಳ ಕಾಲ ಸಂಚಾರ ದಟ್ಟಣೆಯಾಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸುದ್ದಿ ಮಾಡಿತ್ತು. ಈ ಬಗ್ಗೆ ಪ್ರಸಿದ್ಧ ಸ್ಟ್ಯಾಂಡ್‌ ಅಪ್ ಹಾಸ್ಯನಟ ಟ್ರೆವರ್ ನೋಹ್‌ ಸಾಕಷ್ಟು ಹಾಸ್ಯ ಮಾಡಿದ್ದರು.
“ವೈಯಕ್ತಿಕ ವಾಹನಗಳ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಮೂಲಸೌಕರ್ಯ ಮತ್ತು ಸೇವೆಗಳನ್ನು ಸುಧಾರಿಸುವುದು ಸುಸ್ಥಿರ ಚಲನಶೀಲತೆ ಪರಿಹಾರಗಳನ್ನು ಸಾಧಿಸಲು ಸಮಗ್ರ ಕಾರ್ಯತಂತ್ರವಾಗಿ ಮಾಡಬೇಕಾಗಿದೆ. ದಟ್ಟಣೆ ಶುಲ್ಕವು ವೈಯಕ್ತಿಕ ವಾಹನಗಳ ಬಳಕೆಯನ್ನು ನಿರುತ್ಸಾಹಗೊಳಿಸುವ ಪ್ರಮುಖ ಕಾರ್ಯತಂತ್ರವಾಗಿದೆ ಎಂದು ವರ್ಮಾ ಹೇಳುತ್ತಾರೆ.
ಸರ್ಕಾರದ ಮಾಜಿ ಅಧಿಕಾರಿ ಕೆ.ಜೈರಾಜ್, ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳನ್ನು ಗಮನಿಸಿದರೆ ದಟ್ಟಣೆ ಶುಲ್ಕ ವಿಧಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಸರ್ಕಾರವು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾರ್ವಜನಿಕ ಚರ್ಚೆ ನಡೆಸಬೇಕು, ತನ್ನ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಇದನ್ನು ಜಾರಿಗೆ ತರಲು ನೋಡುತ್ತಿದೆ ಎಂದು ಅನಿಸುತ್ತಿದೆ ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos