ಬೆಂಗಳೂರು, ಡಿ. 22 : ಬೆಳ್ಳಂದೂರು ಕೆರೆಗೆ ಸೇರ್ಪಡೆಯಾಗುವ ಸಂಸ್ಕರಿಸದ ತ್ಯಾಜ್ಯ ನೀರಿನಲ್ಲಿರುವ ಹೆಚ್ಚಿನ ಪ್ರಮಾಣದ ಮಿಥೇನ್ ಅನಿಲವೇ ಕೆರೆಯಲ್ಲಿ ಆಗಿಂದಾಗ್ಗೆ ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗಿದೆ ಎಂದು ಯುನೈಟೆಡ್ ಕಿಂಗ್ಡಮ್ ಯುಕೆ ಸೆಂಟರ್ ಫಾರ್ ಎಕಾಲಜಿ ಆಂಡ್ ಹೈಡ್ರಾಲಜಿ (ಯುಕೆ ಸಿಇಎಚ್) ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.
ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ ಆಂಡ್ ಎನ್ವಿರಾನ್ಮೆಂಟ್ (ಎಟಿಆರ್ಇಇ) ಸಹಯೋಗದೊಂದಿಗೆ ಸಂಶೋಧನೆ ನಡೆಸಲಾಗಿದ್ದು, ‘ಬೆಂಗಳೂರಿನ ಕೆರೆಗಳ ಪುನಶ್ಚೇತನಕ್ಕೆ ಪರಿಹಾರಗಳು’ ಎಂಬ ಕಾರ್ಯಾಗಾರದಲ್ಲಿ ಅಧ್ಯಯನ ವರದಿಯನ್ನು ಪ್ರಸ್ತುತಪಡಿಸಲಾಗಿದೆ.
ಸಂಸ್ಕರಿಸಲ್ಪಟ್ಟ ನೀರು ಸೇರ್ಪಡೆಯಾದ ಜಕ್ಕೂರು ಕೆರೆಯ ನೀರಿನೊಂದಿಗೆ ಸಂಸ್ಕರಿಸದ ನೀರು ಸೇರುವ ಬೆಳ್ಳಂದೂರು ಕೆರೆಯ ಮಿಥೇನ್ ಪ್ರಮಾಣ ಹೋಲಿಸಿ ಸಂಶೋಧನೆ ನಡೆಸಲಾಗಿದೆ.