ಬಿಇಎಲ್ ಮ್ಯಾನೇಜ್ಮೆಂಟ್ ಇಂಡಸ್ಟ್ರಿಯಲ್ ಟ್ರೈನಿ ಹುದ್ದೆಗಳಿಗೆ ವಾಕ್-ಇನ್ ಇಂಟರ್ವ್ಯೂ

ಬಿಇಎಲ್ ಮ್ಯಾನೇಜ್ಮೆಂಟ್ ಇಂಡಸ್ಟ್ರಿಯಲ್ ಟ್ರೈನಿ ಹುದ್ದೆಗಳಿಗೆ ವಾಕ್-ಇನ್ ಇಂಟರ್ವ್ಯೂ

ಬೆಂಗಳೂರು, ಮೇ. 29, ನ್ಯೂಸ್ ಎಕ್ಸ್ ಪ್ರೆಸ್: ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೇಮಕಾತಿ ಮ್ಯಾನೇಜ್ಮೆಂಟ್ ಇಂಡಸ್ಟ್ರಿಯಲ್ ಟ್ರೈನಿ ಹುದ್ದೆಗಳಿಗೆ ವಾಕ್-ಇನ್ ಇಂಟರ್ವ್ಯೂ ನಡೆಸಲಾಗುತ್ತಿದೆ. ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ವಾಕ್-ಇನ್ ಇಂಟರ್ವ್ಯೂನಲ್ಲಿ ಭಾಗವಹಿಸಬಹುದು.

ಅಭ್ಯರ್ಥಿಗಳು ಹುದ್ದೆಗಳಿಗೆ ಕೇಳಲಾಗಿರುವ ಅರ್ಹತೆಯನ್ನು ಹೊಂದಿದ್ದಲ್ಲಿ ಜೂನ್ 7,2019 ರಂದು ನಡೆಯುವ ವಾಕ್-ಇನ್ ಇಂಟರ್ವ್ಯೂನಲ್ಲಿ ಭಾಗವಹಿಸಬಹುದು.

ಶೈಕ್ಷಣಿಕ ವಿದ್ಯಾರ್ಹತೆ: ಇಂಟರ್ಮೀಡಿಯೇಟ್ ಸಿಎ / ಐಸಿಡಬ್ಲ್ಯೂಎ ಪ್ರಮಾಣಪತ್ರವನ್ನು ಹೊಂದಿರುವ ಆಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ: ಅಕ್ಟೋಬರ್ 16,2019ರ ಅನ್ವಯ ಗರಿಷ್ಟ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವೇತನದ ವಿವರ: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 12,000/-ರೂ ವೇತನವನ್ನು ನೀಡಲಾಗುವುದು.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು

ಸಂದರ್ಶನ ನಡೆಯುವ ಸ್ಥಳದ ವಿವರ: ಹೊಂಗಿರಣ ಹಾಲ್, ಸೆಂಟರ್ ಫಾರ್ ಲರ್ನಿಂಗ್ & ಡೆವಲಪ್ಮೆಂಟ್ (ಸಿಎಲ್ಡಿ), ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ಜಾಲಹಳ್ಳಿ,

ಬೆಂಗಳೂರು-560013

 

ಫ್ರೆಶ್ ನ್ಯೂಸ್

Latest Posts

Featured Videos