ಬೆಂಗಳೂರು, ಜೂ.19: ಐಎಂಎ ಪ್ರಕರಣದಿಂದ ಶಾಲೆಗೆ ನೇಮಕ ಮಾಡಿದ್ದ ಹೆಚ್ಚುವರಿ ಶಿಕ್ಷಕರನ್ನು ವಾಪಸ್ ಕಳಿಸಿದ ಹಿನ್ನೆಲೆ ವಿಕೆಒ ಶಾಲೆಯ ಮಕ್ಕಳು ಹಾಗೂ ಪೋಷಕರಿಂದ ಮಾಜಿ ಸಚಿವ ರೋಷನ್ ಬೇಗ್ ಮನೆಯ ಮುಂದೆ ಪ್ರತಿಭಟನೆ ನಡೆಸಲಾಯ್ತು.
ವಿದ್ಯಾರ್ಥಿಗಳಿಂದ ಪ್ರತಿಭಟನೆ ಯಾಕೆ?
ಮಾಜಿ ಸಚಿವ ರೋಷನ್ ಬೇಗ್ ಅವರ ಫ್ರೇಜರ್ ಟೌನ್ ನಿವಾಸದ ಮುಂಭಾಗ ವಿಕೆಒ ಶಾಲೆಯ ಮಕ್ಕಳು ಮತ್ತು ಪೋಷಕರ ಪ್ರತಿಭಟನೆ ನಡೆಯಿತು. ಐಎಂಎ ವತಿಯಿಂದ ವಿಕೆಒ ಶಾಲೆಗೆ ಧನಸಹಾಯ ನೀಡಲಾಗಿತ್ತು. ಐಎಂಎ ಧನ ಸಹಾಯದಿಂದ ವಿಕೆಒ ಶಾಲೆಗೆ ಹೆಚ್ಚುವರಿಯಾಗಿ ಶಿಕ್ಷಕರ ನೇಮಕ ಕೂಡ ಮಾಡಲಾಗಿತ್ತು. ಐಎಂಎ ಪ್ರಕರಣದಿಂದ ಶಾಲೆಗೆ ನೇಮಕ ಮಾಡಿದ್ದ ಹೆಚ್ಚುವರಿ ಶಿಕ್ಷಕರನ್ನು ವಾಪಸ್ ಕಳಿಸಲಾಗಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳ ಪೋಷಕರು ಐಎಂಎ ನೇಮಕ ಮಾಡಿದ್ದ ಶಿಕ್ಷಕರನ್ನು ವಾಪಸ್ ಕರೆಸಿ ಅಂತ ಪ್ರತಿಭಟನೆ ಮಾಡಿದರು.
ಪೋಷಕರು, ವಿದ್ಯಾರ್ಥಿಗಳಿಂದ ಶಿಕ್ಷಕರ ವಾಪಸಾತಿಗೆ ಆಗ್ರಹ ಕೇಳಿ ಬಂತು. ರೋಷನ್ ಬೇಗ್ ನೆರವಿನಿಂದಲೇ ಶಾಲೆಗೆ ಐಎಂಎ ಶಿಕ್ಷಕರ ನೇಮಕ ಮಾಡಲಾಗಿತ್ತು ಎನ್ನಲಾಗಿದೆ. ಇನ್ನು ಪ್ರತಿಭಟನೆ ವೇಳೆ ರೋಷನ್ ಬೇಗ್ ನಿವಾಸದಿಂದ ಪ್ರತಿಭಟನಾಕಾರರನ್ನು ಪೊಲೀಸರು ದೂರ ಕಳಿಸಿದ್ರು. ಬೇಗ್ ನಿವಾಸವಿರುವ ಮಾರ್ಗದ 2 ಕೊನೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದಾರೆ. ಪರಿಸ್ಥಿತಿ ತಿಳಿಗೊಳ್ಳುವವರೆಗೂ ಈ ವ್ಯವಸ್ಥೆ ಮುಂದುವರಿಯಲಿದೆ. ಈ ಪ್ರತಿಭಟನೆ ಬಳಿಕ ರೋಷನ್ ಬೇಗ್ ನಿವಾಸದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.