ಬೆಂಗಳೂರು, ಆ. 26: ನೇಕಾರಿಕೆ ಒಂದು ಅದ್ಭುತವಾದ ಗುಡಿಕೈಗಾರಿಕೆ ಅಂತಾನೆ ಹೇಳಬಹುದುಬಹುದು ಜೊತೆಗೆ ಅಳಿವಿನಂಚಿನಲ್ಲಿರುವ ಈ ಉದ್ಯಮವನ್ನು ಉಳಿಸಲು ಸರಕಾರಾ ನಾನಾ ರೀತಿಯ ಯೋಜನೆ ಗಳನ್ನು ರೂಪಿಸುತ್ತಿದೆ. ಆದರೆ, ಅಂತಹ ನೇಕಾರರಿಗೆ ಇಲ್ಲೊಂದು ಕಡೆ ಅಕ್ರಮವಾಗಿ ಹೆಚ್ಚುವರಿ ತೆರಿಗೆ ಕಟ್ಟುವಂತೆ ಸರಕಾರದ ಆದೇಶ ಇಲ್ಲದಿದ್ದರು ಸಹ ಸ್ಥಳೀಯ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಹೌದು, ಬೆಂಗಳೂರಿಗೆ ಕೂಗಳತೆಯ ದೂರದಲ್ಲಿರುವ ಗೊಟ್ಟಿಗೆರೆಯಲ್ಲಿ ಇಂತಹ ಕೃತ್ಯ ನಡೆಯುತ್ತಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುತ್ತಿರುವ ನೇಕಾರರಿಗೆ ಬಿಬಿಎಂಪಿ ಅಧಿಕಾರಿಗಳು ಸರಕಾರದ ಯಾವುದೇ ಆದೇಶ ಇಲ್ಲದಿದ್ದರು ಸಹ ಹೆಚ್ಚುವರಿ ಕಂದಾಯ ಕಟ್ಟುವಂತೆ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಹಾಗೂ ಅವರಿಗೆ ನೋಟೀಸ್ ನೀಡಿದ್ದರು ಇದರಿಂದ ಗೊಂದಲಕ್ಕೀಡಾದಂತಹ ನೂರಾರು ನೇಕಾರರು ಇಂದು ಗೊಟ್ಟಿಗೆರೆ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವನ್ನು ವ್ಯಕ್ತಪಡಿಸಿದರು .
ಈಗಾಗಲೆ ಈ ಉದ್ಯಮ ನಶಿಸಿಹೋಗುತ್ತಿರುವುದು ಒಂದೆಡೆಯಾದರೆ ಮತ್ತೊಂದು ಕಡೆ ಇಲ್ಲದೇ ಇರುವ ತೆರಿಗೆಯನ್ನು ಅವರ ಮೇಲೆ ಅಧಿಕಾರಿಗಳು ಹೇರೋಕೆ ಹೊರಟಿರುವುದು ಅವರ ಆಕ್ರೋಶ ಕ್ಕೆ ಕಾರಣವಾಗಿದೆ . ವಿಷಯ ತಿಳಿದು ಕೂಡಲೆ ಸ್ಥಳಕ್ಕೆ ಬಂದಂತಹ ಜನಪ್ರತಿನಿಧಿಗಳು ಈ ರೀತಿ ತೆರಿಗೆ ಹೆಚ್ಚು ಕಟ್ಟುವ ಕುರಿತು ಯಾವುದೆ ಅಧಿಕೃತ ಆದೇಶವಿಲ್ಲ . ನೇಕಾರರು ಯಾವುದೇ ಭಯಪಡಬೇಕಿಲ್ಲ ಎಂದು ಅವರನ್ನು ಸಮಾಧಾನ ಪಡಿಸಿದ್ದಾರೆ.