ಕರ್ತವ್ಯಲೋಪ ಎಸಗಿರುವ ಬಿಬಿಎಂಪಿಯ 5 ಅಧಿಕಾರಿಗಳನ್ನು ಅಮಾನತು

ಕರ್ತವ್ಯಲೋಪ ಎಸಗಿರುವ ಬಿಬಿಎಂಪಿಯ 5 ಅಧಿಕಾರಿಗಳನ್ನು ಅಮಾನತು

ಮಹದೇವಪುರ, ಅ. 11: ಸ್ಟೆರ್ಲಿಂಗ್ ಹರ್ಬನ್ ಇನ್ ಫ್ರಾ ಫ್ರಾಸ್ಟ್ರಕ್ಟರ್ ಕಂಪನಿಗೆ ಕಂದಾಯ ಪರಿವೀಕ್ಷಕರು ಭೂಪರಿವರ್ತನೆ ಆದೇಶ ಮತ್ತು ನೋಂದಾಯಿತ ದಾಖಲೆಗಳು ಲಭ್ಯವಿಲ್ಲದೇ ಇದ್ದರೂ ಸಹ ಮೇಲಧಿಕಾರಿಗಳಿಗೆ ಕಾನೂನು ಬಾಹಿರವಾಗಿ ಪ್ರಸ್ತಾವನೆ ಸಲ್ಲಿಸಿ ಕರ್ತವ್ಯ ಲೋಪ ಮಾಡಿರುವುದರಿಂದ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಕೆಂಪರಂಗಯ್ಯ (ಕಂದಾಯ ಅಧಿಕಾರಿ) ದೊಡ್ಡ ಶಾಮಾಚಾರಿ ( ಸಹಾಯಕ ಕಂದಾಯ ಅಧಿಕಾರಿ) ಲೋಕೇಶ್ ಬಾಬು ( ಕಂದಾಯ ಪರಿವೀಕ್ಷಕರು ) ಜಗದೀಶ್ (ನಿಕಟ ಪೂರ್ವ ಜಂಟಿ ಆಯುಕ್ತ) ಶಿವೇಗೌಡ (ಉಪ ಆಯುಕ್ತ) ಅಮಾನತುಗೊಂಡ ಅಧಿಕಾರಿಗಳು.

ಮೇಲ್ಕಂಡ ಅಧಿಕಾರಿಗಳು ಬೆಳ್ಳಂದೂರು ಗ್ರಾಮದಲ್ಲಿರುವ ಒಟ್ಟು 33 ಎಕರೆ ಪ್ರದೇಶಕ್ಕೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಿಂದ ಅಭಿವೃದ್ದಿ ಯೋಜನಾ ನಕ್ಷೆ ಪಡೆದುಕೊಂಡು ಖಾತೆ ನೊಂದಾವಣಿ ಕೋರಿ ಸಕಾಲ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರಸ್ತಾವನೆಗೆ ಸಂಬಂಧಿಸಿದಂತೆ ಕಂದಾಯ ಪರಿವೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಸ್ಪಷ್ಟ ವರದಿ ಹಾಗೂ ಶಿಫಾರಸ್ಸಿನೊಡನೆ ಕಡತವನ್ನು ಕಂದಾಯ ಅಧಿಕಾರಿಗೆ ಮಂಡಿಸಬೇಕಾಗಿತ್ತು. ಈ ರೀತಿ ಯಾವುದೇ ಅಧಿಕಾರಿಗಳು ಕಾನೂನು ಬದ್ದವಾಗಿ ಪರಿಶೀಲಿಸದೇ ಮಂಡಿಸಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಖಾತಾ ನೋಂದಾವಣಿಗೆ ಅನುಮೋದನೆ ನೀಡುವ ಅಧಿಕಾರವು ದತ್ತವಾಗಿದ್ದು ಜಂಟಿ ಆಯುಕ್ತರ ಆದೇಶವೇ ಅಂತಿಮವಾಗಿರುತ್ತದೆ. ಅಧೀನ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಲ್ಲಿಸಲಾಗುವ ಪ್ರಸ್ತಾವನೆಗೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿಯೇ ಅನುಮೋದನೆ ನೀಡಬೇಕಿದ್ದರೂ ಸಹ ವಲಯ ಮಟ್ಟದ ಅಧಿಕಾರಿಗಳು ಮತ್ತು ಜಂಟಿ ಆಯುಕ್ತರ ಪ್ರಸ್ತಾಪಿತ ಪ್ರಕರಣದಲ್ಲಿ ಟಿಪ್ಪಟಿ ಹಾಳೆಯಲ್ಲಿ ನಮೂದಾಗಿರುವ ಎಲ್ಲಾ ದಾಖಲೆಗಳು ಕಡತದಲ್ಲಿ ಲಭ್ಯವಿದೆಯೇ ಎಂದು ಪರಿಶೀಲನೆಯನ್ನೂ ಸಹ ನಡೆಸದೇ , ಭೂ ಪರಿವರ್ತನೆ ಆದೇಶ ಮತ್ತು ನೋಂದಾಯಿತ ಮಾಲಿಕತ್ವದ ದಾಖಲೆಗಳು ಲಭ್ಯವಿಲ್ಲದೇ ಇದ್ದರೂ ಸಹ ಒಂದೇ ದಿನ ಉಪ ಆಯುಕ್ತರು ಮತ್ತು ಜಂಟಿ ಆಯುಕ್ತರು ಖಾತೆ ನೊಂದಾಯಿಸಲು ಅನುಮೋದನೆ ನೀಡಿರುವುದು ಕಾನೂನು ಬಾಹಿರ ಎಂದು ಹೇಳಲಾಗಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos