ಬಿಬಿಎಂಪಿ 2019-20ನೇ ಬಜೆಟ್ ಮಂಡನೆ: ಯಾವುದಕ್ಕೆ ಎಷ್ಟೆಷ್ಟು?

ಬಿಬಿಎಂಪಿ 2019-20ನೇ ಬಜೆಟ್ ಮಂಡನೆ: ಯಾವುದಕ್ಕೆ ಎಷ್ಟೆಷ್ಟು?

ಬೆಂಗಳೂರು: ಬಿಬಿಎಂಪಿ 2019-20ನೇ ಸಾಲಿನ ಆಯವ್ಯಯವನ್ನು
ತೆರಿಗೆ ಮತ್ತು ಆರ್ಥಿಕ ಸ್ಥಾಯಿ
ಸಮಿತಿ ಅಧ್ಯಕ್ಷೆ ಎಸ್.ಪಿ. ಹೇಮಲತಾ
 ಅವರು
ಮಂಡಿಸಿದರು.

10,688.63 ಕೋಟಿ
ರೂ. ವೆಚ್ಚದ ಬಜೆಟ್ ಮಂಡಿಸುವುದಕ್ಕೂ ಮುನ್ನ
ಮೌನ ಆಚರಿಸುವ ಮೂಲಕ ಹುತಾತ್ಮ
ಯೋಧರಿಗೆ ಗೌರವ ಸಲ್ಲಿಸಿದರು.

ಬಿಜೆಪಿ ಸದಸ್ಯರು ಮೇಯರ್ ಪೀಠದ ಎದುರು ಕಪ್ಪು ಬಟ್ಟೆ ಧರಿಸಿ ಬಿತ್ತಿಪತ್ರಗಳನ್ನು ಹಿಡಿದು ಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಬೋಗಸ್ ಬಜೆಟ್, ಲೂಟಿ ಕೋಟಿ.. ಕೋಟಿ..,  ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಬಾರಿಯ ಬಜೆಟ್‍ ನಲ್ಲಿ ರಸ್ತೆಗಳ ಅಭಿವೃದ್ಧಿ ಹಾಗೂ ವೈಟ್ ಟಾಪಿಂಗ್ಗಾಗಿ 3,300 ಕೋಟಿ ರೂ.ಗೂ ಅಧಿಕ ವೆಚ್ಚದ ಕ್ರಿಯಾ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ಒಟ್ಟು ಬಜೆಟ್‍ ನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ 4945.91 ಕೋಟಿ, ಘನತ್ಯಾಜ್ಯ ನಿರ್ವಹಣೆಗೆ 1,186 ಕೋಟಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ 1,071.43 ಕೋಟಿ ವರ್ಗೀಕರಿಸಲಾಗಿದೆ.

ಕಲ್ಯಾಣ ಕಾರ್ಯಕ್ರಮಗಳಲ್ಲಿ ಕೆಲವು:
• ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ವೈಯಕ್ತಿಕ ಮನೆ ನಿರ್ಮಾಣ. ಪ್ರತೀ ವಾರ್ಡ್ಗೆ 5 ಮನೆಯಂತೆ 50 ಕೋಟಿ ಮೀಸಲಿರಿಸಲಾಗಿದೆ.
• “ಅನ್ನಪೂರ್ಣೇಶ್ವರಿ” ಸ್ವಯಂ ಉದ್ಯೋಗ ಹೊಂದಲು ಸಂಚಾರಿ ಕ್ಯಾಂಟೀನ್ ವಾಹನ ಸೌಲಭ್ಯವನ್ನು ಪ್ರತೀ ವಿಧಾನ ಸಭಾ ಕ್ಷೇತ್ರಕ್ಕೆ 4 ವಾಹನಗಳಂತೆ ಶೇ.50ರಷ್ಟು ಸಬ್ಸಿಡಿ ದರದಲ್ಲಿ ನೀಡಲು 5 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.
• ದಿವ್ಯಾಂಗ ಚೇತನರ ಕಲ್ಯಾಣ ಕಾರ್ಯಕ್ರಮಗಳಿಗಾಗಿ 75 ಕೋಟಿ ರೂ. ಅನುದಾನ
• ಶುಚಿತ್ವಕ್ಕಾಗಿ ಸ್ಯಾನಿಟರಿ ಇನ್ಸಿನೇಟರ್ ಯಂತ್ರವನ್ನು ಒದಗಿಸುವ ಕಾರ್ಯಕ್ರಮವನ್ನು ಮುಂದುವರೆಸಿ, ಈ ಬಾರಿಯ ಬಜೆಟ್ನಲ್ಲಿ 50 ಲಕ್ಷ ರೂ. ಮೀಸಲಿಡಲಾಗಿದೆ.

ಹೆಣ್ಣು ಮಗುವಿಗೆ ಮಹಾಲಕ್ಷ್ಮೀ
ಯೋಜನೆ:

 ಪಾಲಿಕೆ
24 ಹೆರಿಗೆ ಆಸ್ಪತ್ರೆಗಳಲ್ಲಿ 2019ರ ಏಪ್ರಿಲ್ 1ರಿಂದ
2020ರ ಮಾರ್ಚ್ 31ರ ವರೆಗೆ ಜನಿಸುವ
ಹೆಣ್ಣು ಮಗುವಿನ ಹೆಸರಿನಲ್ಲಿ 1 ಲಕ್ಷ
ಮೌಲ್ಯದ 15 ವರ್ಷ ಅವಧಿ ಬಾಂಡ್
ನೀಡಲಾಗುತ್ತಿದೆ. ಇದಕ್ಕಾಗಿ 60 ಕೋಟಿ ಅನುದಾನ ಮೀಸಲಿದೆ.

ನಗರದ ತುಮಕೂರು ರಸ್ತೆಯಲ್ಲಿ ಶಿವಕುಮಾರ
ಸ್ವಾಮೀಜಿ ಪುತ್ಥಳಿ ಸ್ಥಾಪನೆಗೆ 5 ಕೋಟಿ
ರೂ. ಹಾಗೂ ಕಸ ವಿಲೇವಾರಿ ಮಾಡುವ
ಪೌರ ಕಾರ್ಮಿಕರಿಗೆ ರಾಜ್ಯ ಸರ್ಕಾರದ ಮೂಲಕ
ವೇತನ ಪಾವತಿಸಲು 375 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಕ್ರಿಯಾ ಯೋಜನೆಗಳಲ್ಲಿ ಕೆಲವು:

• ರಸ್ತೆಗಳ ಅಭಿವೃದ್ಧಿ- 2,246 ಕೋಟಿ ರೂ.
• ಘನತ್ಯಾಜ್ಯ ನಿರ್ವಹಣೆ- 753 ಕೋಟಿ ರೂ.
• ವೈಟ್ ಟಾಪಿಂಗ್- 1,172 ಕೋಟಿ ರೂ.
• ಕೆರೆಗಳ ಅಭಿವೃದ್ಧಿ- 348 ಕೋಟಿ ರೂ.
• 110 ಹಳ್ಳಿಗಳ ರಸ್ತೆಗಳ ಅಭಿವೃದ್ಧಿ- 275 ಕೋಟಿ ರೂ.
• ಕಟ್ಟಡಗಳು ಮತ್ತು ಆಸ್ಪತ್ರೆಗಳು- 247.95 ಕೋಟಿ ರೂ.
• ಪಾದಾಚಾರಿ ಮಾರ್ಗಗಳ ಅಭಿವೃದ್ಧಿ- 75.00 ಕೋಟಿ ರೂ.
• ಐ.ಟಿ.ಪಿ.ಎಲ್.ಗೆ ಸಂಪರ್ಕಿಸುವ 14 ಪರ್ಯಾಯ ರಸ್ತೆಗಳ ಅಭಿವೃದ್ಧಿ- 80 ಕೋಟಿ ರೂ.
• ಸಿದ್ಧಗಂಗಾ ಶ್ರೀಗಳ ಪುತ್ತಳಿ ನಿರ್ಮಾಣಕ್ಕಾಗಿ 5 ಕೋಟಿ.ರೂ ಮಿಸಲಿಡಲಾಗಿದೆ.
• ಬೊಮ್ಮನಹಳ್ಳಿಯ ಕೆಸಿಡಿಸಿ ಸುತ್ತಮುತ್ತ ಅಭಿವೃದ್ಧಿಗೆ 20 ಕೋಟಿ ರೂ.

• ಮಂಡೂರು ಕಸ ವಿಲೇವಾರಿ ಘಟಕದ ಸುತ್ತಮುತ್ತ ಅಭಿವೃದ್ಧಿಗೆ – 20 ಕೋಟಿ ರೂ. ಮೀಸಲು
• ಬೆಳ್ಳಳ್ಳಿ ಮತ್ತು ಮಿಟಗಾನಹಳ್ಳಿ ಕಸ ವಿಲೇವಾರಿ ಘಟಕಗಳ ಸುತ್ತ ಮುತ್ತ ಪ್ರದೇಶಗಳ ಅಭಿವೃದ್ಧಿಗೆ – 20 ಕೋಟಿ ರೂ ಮೀಸಲು.
• ಮಾವಳ್ಳಿಪುರ ಕಸ ಘಟಕದ ಸುತ್ತ ಮುತ್ತ ಅಭಿವೃದ್ಧಿಗೆ -20 ಕೋಟಿ ರೂ.
• ದೊಡ್ಡಬಿದರಕಲ್ಲು ಕಸ ವಿಲೇವಾರಿ ಘಡಕ ಸುತ್ತಮುತ್ತ ಅಭಿವೃದ್ಧಿಗೆ – 15 ಕೋಟಿ ರೂ.
• ಸುಬ್ರಹ್ಮಣ್ಯಪುರ, ಲಿಂಗದೀರನಹಳ್ಳಿ ಮತ್ತು ಕನ್ನಳ್ಳಿ, ಸೀಗೇಹಳ್ಳಿ ಕಸ ವಿಲೇವಾರಿ ಘಟಕಗಳ ಸುತ್ತಮುತ್ತ ಅಭಿವೃದ್ಧಿಗೆ – 15 ಕೋಟಿ ರೂ. ಮೀಸಲು

ಫ್ರೆಶ್ ನ್ಯೂಸ್

Latest Posts

Featured Videos