ಬಾಯಿಯ ದುರ್ವಾಸನೆ ಗೆ ಪರಿಹಾರಗಳು

ಬಾಯಿಯ ದುರ್ವಾಸನೆ ಗೆ ಪರಿಹಾರಗಳು

ಬೆಂಗಳೂರು, ಅ. 24 : ದುರ್ವಾಸನೆಯ ಉಸಿರಾಟದ (ಹ್ಯಾಲಿಟೋಸಿಸ್) ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಸಾಮನ್ಯ. ಹ್ಯಾಲಿಟೋಸಿಸ್ ಸಮಸ್ಯೆಗೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಬಾಯಿಯ ಕಳಪೆ ನೈರ್ಮಲ್ಯತೆ ಪ್ರಮುಖವಾಗಿದೆ. ಇದರಿಂದ ಅನೇಕ ಸಲ ಆತಂಕ, ಕಿರಿಕಿರಿ, ಮುಜುಗರ ಆಗಬಹುದು. ಕೆಲವೊಮ್ಮೆ ಮಾನಸಿಕ ಸಮಸ್ಯೆಗಳಿಗೂ ಕಾರಣ ಆಗಬಹುದು. ಹ್ಯಾಲಿಟೋಸಿಸ್ ಶೇ.90ರಷ್ಟು ಆಗುವುದು ಬಾಯಿಯ ಸಮಸ್ಯೆಗಳಿಂದಾಗಿ. ಇನ್ನುಳಿದ ಶೇ.10ರಷ್ಟು ಹ್ಯಾಲಿಟೋಸಿಸ್ ಸಾಧ್ಯತೆ ದೇಹದ ಇತರ ತೊಂದರೆಗಳಿಂದ ಆಗಬಹುದು.
ಬಾಯಿಯ ಕಳಪೆ ನೈರ್ಮಲ್ಯ ಬಾಯಿಯಿಂದ ಉಸಿರಾಡುವುದು* ನಾಲಗೆಯನ್ನು ಸ್ವಚ್ಛಗೊಳಿಸದೆ ಇರುವುದು ದಂತಕುಳಿಗಳು, ಬಾಯಿಹುಣ್ಣು ಹಾಗೂ ಕೀವು ತುಂಬಿದ ಗಾಯವಾಗಿರುವುದು (abscess) ಉಪವಾಸ ಇರುವುದು ಸರಿಯಾಗಿ ಹಲ್ಲುಗಳನ್ನು ಶುಚಿಗೊಳಿಸದಿರುವುದು ಮತ್ತು ಫ್ಲಾಸ್ ಬಳಕೆ ಮಾಡದಿರುವುದು ಧೂಮಪಾನ ಮತ್ತು ತಂಬಾಕು ಸೇವನೆ ಈರುಳ್ಳಿ, ಬೆಳ್ಳುಳ್ಳಿಗಳಂತಹ ಆಹಾರಪದಾರ್ಥಗಳ ಸೇವನೆ ಬಾಯಿಯ ತೇವಾಂಶ ಕಡಿಮೆ ಇರುವುದು (ಕೆಲವು ಔಷಧಗಳ ಅಡ್ಡಪರಿಣಾಮ)* ಮೂಗು ಮತ್ತು ಗಂಟಲಿನಲ್ಲಿ ಸೋಂಕು, ಸೈನಸ್ನ ಸೋಂಕು ಗ್ಯಾಸ್ಟ್ರಿಕ್ ರೀಫ್ಲೆಕ್ಸಸ್ ಮಕ್ಕಳಲ್ಲಿ ಶೀತ ಜ್ವರವಿದ್ದಾಗ ಅಪರೂಪಕ್ಕೆ ಹ್ಯಾಲಿಟೋಸಿಸ್ ಮಧುಮೇಹ, ಪಿತ್ತಜನಕಾಂಗದ ಅಥವಾ ಮೂತ್ರಪಿಂಡದ ಕಾಯಿಲೆಯ ಸಂಕೇತವೂ ಆಗಿರಬಹುದು.

 ನಿರ್ವಹಣೆ ಹೇಗೆ? :
ಮನೆಯಲ್ಲೇ ಮಾಡಬಹುದಾದ ಪರಿಹಾರಗಳೆಂದರೆ, ಸರಿಯಾದ ಕ್ರಮದಲ್ಲಿ ಹಲ್ಲುಗಳ ಶುಚಿ. ಊಟದ ನಂತರ ನಾಲಗೆಯನ್ನು ಶುಚಿಯಾಗಿಟ್ಟುಕೊಳ್ಳುವುದು. ಫ್ಲಾಸಿಂಗ್ ಕೂಡ ಉಪಯುಕ್ತ. ಪ್ರತಿ ಮೂರು ತಿಂಗಳಿಗೆ ಬ್ರಷ್ ಬದ್ಝಜಿಸುವುದು ಸೂಕ್ತ. ಸಾಕಷ್ಟು ನೀರು ಕುಡಿಯುವುದು, ಆಹಾರ ಕ್ರಮದಲ್ಲಿನ ಬದಲಾವಣೆಯೂ ಸಹಾಯ ಮಾಡುತ್ತದೆ. ಕಾಫಿ ಮತ್ತು ಮದ್ಯಸೇವನೆಯನ್ನು ಕಡಿಮೆ ಮಾಡಿ, ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಿ. ಬಾಯಿ ಒಣಗಿದ್ದಲ್ಲಿ ಪದೇಪದೆ ನೀರನ್ನು ಕುಡಿಯುವುದರಿಂದ ಬಾಯಿವಾಸನೆಯನ್ನು ತಪ್ಪಿಸಬಹುದು. ಇಷ್ಟಾಗಿಯೂ ಕೆಟ್ಟ ಉಸಿರಾಟ ಮುಂದುವರಿದಲ್ಲಿ ಯೋಗ್ಯ ದಂತವೈದ್ಯರನ್ನು ಭೇಟಿ ಮಾಡಿ. ಒಸಡಿನ ರೋಗ, ಕುಳಿಗಳು ಇರುವ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆಯನ್ನು ಸೂಚಿಸಲಾಗುತ್ತದೆ. ಮೌತ್ವಾಷ್ ತಾತ್ಕಾಲಿಕ ಪರಿಹಾರವಾಗಿದ್ದು, ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಅನುಸರಿಸುವುದು ಉತ್ತಮ. ದಂತವೈದ್ಯರು ನಿಮ್ಮ ಬಾಯಿ ಆರೋಗ್ಯಕರ ಮತ್ತು ಬಾಯಿವಾಸನೆ ಬಾಯಿಯ ಮೂಲದ್ದಲ್ಲ ಎಂದು ನಿರ್ಧರಿಸಿದರೆ ಕುಟುಂಬವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಸೂಕ್ತ.

ಫ್ರೆಶ್ ನ್ಯೂಸ್

Latest Posts

Featured Videos