ಭಾರತ, ಪಾಕ್ ಪಂದ್ಯ ಕುತೂಹಲ

ಭಾರತ, ಪಾಕ್ ಪಂದ್ಯ ಕುತೂಹಲ

ಮೇ. 27, ನ್ಯೂಸ್‍ ಎಕ್ಸ್ ಪ್ರೆಸ್‍: ಇನ್ನು 4 ದಿನ ವಿಶ್ವಕಪ್ ಶುರುವಾಗಲು ಬಾಕಿ ಇದೆ. ಕ್ರಿಕೆಟ್ ಅಭಿಮಾನಿಗಳು ರೋಚಕ ಪಂದ್ಯಕ್ಕೆ ಎದುರು ನೋಡ್ತಿದ್ದಾರೆ. ಇಂಗ್ಲೆಂಡ್ ಹಾಗೂ ವೇಲ್ಸ್ ನ 11 ಮೈದಾನಗಳಲ್ಲಿ 48 ಪಂದ್ಯಗಳು ನಡೆಯಲಿವೆ. 2ಸೆಮಿಫೈನಲ್ ಹಾಗೂ1 ಫೈನಲ್ ಸೇರಿದೆ. ಫೈನಲ್ ಗಿಂತ ಜೂನ್ 16ರಂದು ನಡೆಯುವ  ಭಾರತ-ಪಾಕಿಸ್ತಾನ ಪಂದ್ಯ ಎಲ್ಲರಲ್ಲಿ ಕುತೂಹಲ ಮೂಡಿಸಲಿದೆ.

ಪುಲ್ವಾಮಾ ದಾಳಿ ನಂತರ ಭಾರತ ಕ್ರಿಕೆಟ್ ಬೋರ್ಡ್, ಪಾಕಿಸ್ತಾನದ ವಿರುದ್ಧ ವಿಶ್ವಕಪ್ ಆಡುವುದಿಲ್ಲವೆಂದು ಹೇಳಿತ್ತು. ಐಸಿಸಿ ನಿಯಮ ಪ್ರಕಾರ ಪಂದ್ಯ ಆಡ್ತಿದೆ. ಮ್ಯಾಂಚೆಸ್ಟರ್ ನಲ್ಲಿ 25 ಸಾವಿರ ಪ್ರೇಕ್ಷಕರು ನೇರವಾಗಿ ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಣೆ ಮಾಡಬಹುದಾಗಿದೆ. ಮೇ 13 ರಂದು ಭಾರತ-ಪಾಕ್ ಪಂದ್ಯಾವಳಿಯ ಎಲ್ಲ ಟಿಕೆಟ್ ಮಾರಾಟವಾಗಿವೆ. ಕ್ರಿಕೆಟ್ ಅಭಿಮಾನಿಗಳು ನೋಡಲು ಬೇರೆ ಬೇರೆ ದೇಶಗಳಿಂದ ಬರ್ತಿದ್ದಾರೆ. ಭಾರತ-ಪಾಕ್ ಪಂದ್ಯದ ಜೊತೆ ಇಂಗ್ಲೆಂಡ್-ಆಸ್ಟ್ರೇಲಿಯಾ ಮಧ್ಯೆ ನಡೆಯುವ ಪಂದ್ಯವೂ ಕುತೂಹಲಕಾರಿಯಾಗಿರಲಿದೆ.

ಫ್ರೆಶ್ ನ್ಯೂಸ್

Latest Posts

Featured Videos