ಮಾಸ್ಕ್ ಧರಿಸಿ ಬಾಂಗ್ಲಾ ಕ್ರಿಕೆಟಿಗರು ಅಭ್ಯಾಸ

ಮಾಸ್ಕ್ ಧರಿಸಿ ಬಾಂಗ್ಲಾ ಕ್ರಿಕೆಟಿಗರು ಅಭ್ಯಾಸ

ನವದೆಹಲಿ, ನ.1 : ಈಗ ಚಳಿಗಾಲ ಆರಂಭ ಆಗುತ್ತಿದ್ದಂತೆಯೇ ‘ಮಂಜಿ’ನೊಂದಿಗೆ ಹೊಗೆ ಒಳಗೊಂಡ ‘ಹೊಂಜು’ ಆವರಿಸಿದ್ದರಿಂದ ರಾಷ್ಟ್ರ ರಾಜಧಾನಿ ವಲಯ ವಾಯು ಮಾಲಿನ್ಯ ಪ್ರಮಾಣ ತೀವ್ರ ಹೆಚ್ಚಿದೆ.
ದೇಶ ರಾಜ್ಯಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ತಾರಕಕ್ಕೇರಿದ್ದು, ದೀಪಾವಳಿ ನಂತರ ಪರಿಸ್ಥಿತಿ ಇನ್ನಷ್ಟು ಉಲ್ಬಣಿಸಿದೆ. ಈ ನಡುವೆ ನವಂಬರ್ 3 ರಂದು ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೆ ರಾಷ್ಟ್ರ ರಾಜಧಾನಿಯ ಕ್ರಿಕೆಟ್ ಮೈದಾನ ಸಜ್ಜಾಗಿದೆ.
ಕ್ರಿಕೆಟಿಗರಿಗೆ ವಾಯು ಮಾಲಿನ್ಯದ ನಡುವೆ ಆಡುವ ತಲೆನೋವು ಶುರು. ಭಾರತಕ್ಕೆ ಬಂದಿಳಿದಿರುವ ಬಾಂಗ್ಲಾ ಕ್ರಿಕೆಟಿಗರು ಅಭ್ಯಾಸ ಆರಂಭಿಸಿದ್ದಾರೆ. ಆದರೆ ಮಾಸ್ಕ್ ಧರಿಸಿ ಅಭ್ಯಾಸ ನಡೆಸುವ ಪರಿಸ್ಥಿತಿ ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos