ಬೆಂಗಳೂರ ,ಆ.25 : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭೀಕರ ಹತ್ಯೆಯಾಗಿದ್ದು, ಬಾಟಲ್ ನಿಂದ ಇರಿದು 33 ವರ್ಷದ ವ್ಯಕ್ತಿಯನ್ನು ಬರ್ಬರ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.ಸಿಲಿಕಾನ್ ಸಿಟಿಯ ಜೆಪಿ ನಗರ ಮೊದಲನೆ ಹಂತದಲ್ಲಿ ನಡೆದಿದೆ.
ಸುನಿಲ್ ಕುಮಾರ್ (33) ಕೊಲೆಯಾದ ವ್ಯಕ್ತಿ. ಶನಿವಾರ ತಡರಾತ್ರಿ ಕೆಲ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬಾಟಲ್ ನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸುನಿಲ್ ಪಂಪ್ ಹೌಸ್ ಪಬ್ ನಲ್ಲಿ ಕೆಲಸ ಮಾಡುತ್ತಿದ್ದ, ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ದಾರಿಯಲ್ಲಿ ಇಬ್ಬರು ಅಡ್ಡಗಟ್ಟಿದ್ದಾರೆ. ಬಾಟಲಿನಿಂದ ಹಲ್ಲೆ ಮಾಡಿದ್ದಾರೆ. ಬಳಿಕ 4 ಜಾಗದಲ್ಲಿ ಅನೇಕ ಬಾರಿ ಬಾಟಲಿನಿಂದ ಇರಿದಿದ್ದಾರೆ. ರಭಸಕ್ಕೆ ಕಾಲಿನ ನರಕಟ್ ಆಗಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಘಟನೆ ಸಂಬಂಧ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ