ಬೆಂಗಳೂರು ಟ್ರಾಫಿಕ್ ಕಂಟ್ರೋಲ್ : ಡ್ರೋಣ್ ಬಳಕೆಗೆ ಚಿಂತನೆ

  • In Metro
  • March 18, 2019
  • 224 Views
ಬೆಂಗಳೂರು ಟ್ರಾಫಿಕ್ ಕಂಟ್ರೋಲ್ : ಡ್ರೋಣ್ ಬಳಕೆಗೆ ಚಿಂತನೆ

ಬೆಂಗಳೂರು, ಮಾ.18, ನ್ಯೂಸ್ ಎಕ್ಸ್ ಪ್ರೆಸ್ : ನಗರದಲ್ಲಿ ವಾಹನಗಳ ಸಂಖ್ಯೆ ವಿಪರೀತವಾಗಿದ್ದು, ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ, ಇದಕ್ಕೆ ಸಂಚಾರಿ ಪೊಲೀಸರಿಂದ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಹಾಗಾಗು ಟ್ರಾಫಿಕ್‌ ಮೇಲೆ ನಿಗಾ ಇಡಲು ಡ್ರೋಣ್‌ ಬಳಕೆಗೆ ಪೊಲೀಸರು ಮುಂದಾಗಿದ್ದಾರೆ. ನಗರದ ಪ್ರಮುಖ ಜಂಕ್ಷನ್‌, ವೃತ್ತ ಹಾಗೂ ವಾಹನ ಹೆಚ್ಚಿರುವ ಪ್ರದೇಶಗಳಲ್ಲಿ ಈ ಡ್ರೋಣ್‌ ಬಳಕೆ ಮಾಡಲಾಗುತ್ತದೆ. ಸಿಗ್ನಲ್‌ ವ್ಯವಸ್ಥೆ ಇದ್ದರೂ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ, ವಾಹನಗಳ ಸಾಂದ್ರತೆಯ ನಿಖರ ಮಾಹಿತಿ ಕೊರತೆಯಿಂದಾಗಿ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ. ಇದಕ್ಕೀಗ ಪರಿಹಾರ ಕಂಡುಕೊಳ್ಳಲು ದಟ್ಟಣೆ ಹೆಚ್ಚಾಗಿರುವ ಜಾಗದಲ್ಲಿ ಡ್ರೋಣ್‌ ಮೂಲಕ ಚಿತ್ರೀಕರಣ ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಅದನ್ನು ಸಂಚಾರ ನಿಯಂತ್ರಣ ಕೇಂದ್ರದಲ್ಲಿ ವಿಶ್ಲೇಷಿಸಿ ಹೊಸ ವ್ಯವಸ್ಥೆ ರೂಪಿಸಲಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಲ್ಲಿ 70 ಲಕ್ಷಕ್ಕೂ ಹೆಚ್ಚು ವಾಹನಗಳಿವೆ ಒಳ ಭಾಗದಲ್ಲಿ 25 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕೆ-ಸ್ಟೆಪ್ಸ್‌ ಮುಂದಾಳತ್ವದಲ್ಲಿ ಡ್ರೋಣ್‌ ಚಿತ್ರೀಕರಣ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಆಂಧ್ರದಲ್ಲಿ ಇಂತಹ ಪ್ರಯೋಗ ಯಶಸ್ವಿಯಾಗಿದೆ. ದಟ್ಟಣೆ ಸ್ಥಳಗಳಲ್ಲಿ ಡ್ರೋಣ್‌ ಬಳಕೆಯಿಂದಾಗಿ ಶೇ.20 ರಷ್ಟು ಟ್ರಾಫಿಕ್‌ ಸುಧಾರಿಸಿದೆ. ವಾಹನ ಸವಾರರಲ್ಲೂ ಜಾಗೃತಿ ಮೂಡಿದ್ದು, ತಪ್ಪು ಮಾಡಿದರೆ ದಂಡ ತೆರಬೇಕಾಗುತ್ತದೆ ಎಂಬ ಎಚ್ಚರಿಕೆ ಮೂಡುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos