ಬಂಡೀಪುರ ಅರಣ್ಯ ಬೆಂಕಿಗೆ ಅಧಿಕಾರಿಗಳೇ ಹೊಣೆ!

ಬಂಡೀಪುರ ಅರಣ್ಯ ಬೆಂಕಿಗೆ ಅಧಿಕಾರಿಗಳೇ ಹೊಣೆ!

ಗುಂಡ್ಲುಪೇಟೆ, ಸೆ. 8 : ಬಂಡಿಪುರ ರಾಷ್ಟ್ರೀಯ ಉದ್ಯಾನದ ಸಾವಿರಾರು ಎಕರೆ ಅರಣ್ಯ ಬೆಂಕಿ ಆಕಸ್ಮಿಕದಿಂದ ನಾಶವಾಗಲು ಅರಣ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪ ಕಾರಣ ಎಂಬ ಅಂಶ ಹಿರಿಯ ಐಎಫ್ಎಸ್ ಅಧಿಕಾರಿ ಹರಿಕುಮಾರ್ ಝಾ ನೇತೃತ್ವದ ವಿಚಕ್ಷಣಾ ಸಮಿತಿ ಸರಕಾರಕ್ಕೆ ಸಲ್ಲಿಸಿರುವ ವರದಿಯಿಂದ ಬಹಿರಂಗಗೊಂಡಿದೆ. ಫೆಬ್ರವರಿಯಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಹರಡಿದ ಬೆಂಕಿಯಿಂದ ಅಂದಾಜು 4419 ಹೆಕ್ಟೇರ್ ಪ್ರದೇಶ ಸುಟ್ಟು ಭಸ್ಮವಾಗಿದೆ. ಬೆಂಕಿರೇಖೆ ನಿರ್ಮಿಸುವ ಕಾಮಗಾರಿಯಲ್ಲಿನ ಲೋಪವೇ ಇದಕ್ಕೆ ಕಾರಣ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಆಗಿನ ಅಧಿಕಾರಿಗಳು ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಫೈರ್ ಲೈನ್ ಮಾಡಲು ಯಾವುದೇ ಟೆಂಡರ್ ಕರೆದಿಲ್ಲ. ಎಪಿಸಿಸಿಎಫ್ ಅವರಿಂದ ಅನುಮತಿ ಪಡೆದಿಲ್ಲ. ಬೇರೆ ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶ ಇರುವಂತೆ 5 ಲಕ್ಷ ಮೌಲ್ಯದ ತುಂಡು ಗುತ್ತಿಗೆಯಾಗಿಯೂ ಪರಿಗಣಿಸಿಲ್ಲ ಎಂಬುದಾಗಿ ವರದಿಯಲ್ಲಿ ತಿಳಿಸಿರುವುದು ಕಾಮಗಾರಿಯಲ್ಲಿ ಗೋಲ್ಮಾಲ್ ನಡೆದಿರುವುದನ್ನು ತೋರಿಸುತ್ತದೆ. ಇಂತಹ ಲೋಪಗಳೇ ಬೆಂಕಿ ದೊಡ್ಡ ಪ್ರಮಾಣದಲ್ಲಿ ಹರಡಲು ಕಾರಣ ಎಂದು ತಿಳಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos